logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ:ಪರ್ಕಳದಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಅವಾಂತರ: ಒಂದೆ ದಿನ ಸರಣಿ ಅಪಘಾತಗಳು

ಟ್ರೆಂಡಿಂಗ್
share whatsappshare facebookshare telegram
5 Dec 2022
post image

ಪರ್ಕಳ: ಒಂದೇ ದಿನದ ಅಂತರದಲ್ಲಿ ಪರ್ಕಳದಲ್ಲಿ ಮೂರು ಸರಣಿ ಅಪಘಾತಗಳು ಸಂಭವಿಸಿವೆ ಈ ಅಪಘಾತಗಳಿಗೆ .ಮಲ್ಪೆ ಪರ್ಕಳ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ169A ಅರೆಬರೆ ಕಾಮಗಾರಿಗಳೆ ಕಾರಣವೆನ್ನಲಾಗಿದೆ.

ಕೆಳಪರ್ಕಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಈಚರ್ ಟೆಂಪೋ: ಎರಡು ಕಾರು ಜಖಂ, ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಕೆಳಪರ್ಕಳದ ತಿರುವಿನಲ್ಲಿ ಭತ್ತದ ಮೂಟೆ ಸಾಗಿಸುತ್ತಿದ್ದ ಈಚರ್ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈಚರ್ ಟೆಂಪೋ ಉಡುಪಿಯಿಂದ ಹೆಬ್ರಿಯ ಕಡೆಗೆ ಭತ್ತದ ಮೂಟೆಗಳನ್ನು‌ ಸಾಗಿಸುತ್ತಿತ್ತು ಎನ್ನಲಾಗಿದೆ. ಮಣಿಪಾಲದಿಂದ ಕೆಳಪರ್ಕಳದ ಕಡೆಗೆ ಸಾಗುತ್ತಿದ್ದ ವೇಳೆ ಎತ್ತರ ಪ್ರದೇಶದ ತಿರುವಿನಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೊ, ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ. ಘಟನೆಯಲ್ಲಿ ಒಂದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಟೆಂಪೋದಲ್ಲಿದ್ದ ಭತ್ತದ ಮೂಟೆಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದೃಷ್ಟವಶಾತ್ ‌ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಚರಂಡಿಗೆ ವಾಲಿ ನಿಂತ ಲಾರಿ ಉಡುಪಿ ಯಿಂದ ಕಾರ್ಕಳ ಕಡೆಗೆ ಸರಕು ಸಾಗಿಸುತಿದ್ದ ಲಾರಿಯೊಂದು ಪರ್ಕಳದ ಗೋಪಾಲಕೃಷ್ಣ ದೇವಾಲಯದ ಬಳಿ ವಾಲಿಕೊಂಡು ನಿಂತಿದ್ದು ಚಾಲಕನ ಸಮಯಪ್ರಜ್ಞೆಗೆ ಯಾವುದೆ ಅಪಘಾತ ವಾಗಿಲ್ಲ

ಓವರ್ಟೇಕ್ ಭರಾಟೆ ಜೀಪ್ ಹಾಗೂ ಬೈಕ್ ಡಿಕ್ಕಿ :

ಜೀಪನ್ನು ಓವರ್ಟೇಕ್ ಮಾಡುವ ಸಲುವಾಗಿ ಸವಾರ ಬೈಕ್ ನಲ್ಲಿ ವೇಗದಿಂದ ಸಾಗುತಿದ್ದ ಸಮಯದಲ್ಲಿ ಜೀಪ್ ಸವಾರ ಹೊಂಡ ತಪ್ಪಿಸಲು ಹೋಗಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ರಸ್ತೆ ಬದಿಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಾಗಿವೆ . ಅಪಾಯ ದಿಂದ ಪಾರಾಗಿದ್ದಾರೆ

ಕಳೆದ ಒಂದು ದಿನದ ಅಂತರದಲ್ಲಿ ಮೂರು ಸರಣಿ ಅಪಘಾತ ಗಳಿಂದ ಜನರು ಕೆಂಗಟ್ಟಿದ್ದಾರೆ ಕಳೆದ ನಾಲ್ಕು ತಿಂಗಳುಗಳಲ್ಲಿ 4 ಕ್ಕೂ ಹೆಚ್ಚು ಲಾರಿಗಳು ದಾರಶಾಹಿಯಾಗಿವೆ.15 ಕ್ಕೂ ಹೆಚ್ಚು ಅಪಘಾತ ಗಳು ಸಂಭವಿಸಿವೆ.ಈ ಭಾಗದಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದೆ. ಕೆಳಪರ್ಕಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಗೊಂದಲ ಉಂಟಾಗುತ್ತದೆ. ಸದ್ಯ ಕಳೆದ ಒಂದು ವಾರಗಳಿಂದ ಹೊಸ ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಸರಿಯಾದ ಸೂಚನಾ ಫಲಕಗಳಿಲ್ಲ. ರಕ್ಷಣಾ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ವಾಹನ ಸವಾರರು ಹಳೆಯ ರಸ್ತೆಯಲ್ಲಿ‌ ಸಂಚರಿಸಬೇಕೋ ಅಥವಾ ಹೊಸ ರಸ್ತೆಯಲ್ಲಿ ಸಂಚರಿಸಬೇಕೋ‌ ಎಂಬ ಗೊಂದಲದಲ್ಲಿದ್ದಾರೆ. ಈ‌ ಬಗ್ಗೆ ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು‌ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.