logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಉಪಲೋಕಾಯುಕ್ತರ ಅಹವಾಲು ಸ್ವೀಕಾರಕ್ಕೆ ಜಿಲ್ಲಾಡಳಿತದಿಂದ ಸಿದ್ದತೆ.

ಟ್ರೆಂಡಿಂಗ್
share whatsappshare facebookshare telegram
2 Feb 2024
post image

ಉಡುಪಿ, ಫೆ.02: ಉಡುಪಿ ನಗರದ ಮಣಿಪಾಲನ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಉಪಲೋಕಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ನಡೆಸಲಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಯನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಯಿತು.

ಉಪಲೋಕಯುಕ್ತರು ಫೆಬ್ರವರಿ 3 ರಂದು 10 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆಯ ವರೆಗೆ ಸಾರ್ವಜನಿಕರಿಂದ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಸರ್ಕಾರದ ಕೆಲಸ ಮಾಡಲು ವೀಳಂಬ ಮಾಡುತ್ತಿದರೆ ತೊಂದರೆ ನೀಡುತ್ತಿದರೆ ಸಾರ್ವಜನಿಕರು ಲಿಖಿತವಾಗಿ ಅಹವಾಲುವನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ. ಸಾರ್ವಜನಿಕರು ನೀಡಿದ ಅರ್ಜಿಗಳನ್ನು ಸ್ವೀಕರಿಸಲು ರಜತಾದ್ರಿ ಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಹೊರಂಗಣದಲ್ಲಿ ಮೂರು ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿದೆ. ಇಲಾಖೆಗಳಿಗೆ ಸಂಬ೦ಧಿಸಿದ೦ತೆ ದೂರುಗಳು ಇದ್ದಲ್ಲೀ ಪ್ರತ್ಯೇಕವಾಗಿ ಅರ್ಜಿಗಳನ್ನು ಸಾರ್ವಜನಿಕರು ನೀಡಬಹುದಾಗಿದೆ, ಪ್ರತಿಯೊಂದು ಅರ್ಜಿಗೂ ಪ್ರತ್ಯೇಕ ಟೋಕನ್ ನಂಬರ್ ಅನ್ನು ನೀಡುವುದರೊಂದಿಗೆ ಕಂಪ್ಯೂಟರ್ ಮೂಲಕ ದಾಖಲೀಕರಣಗೊಳಿಸಿಕೊಳ್ಳಲಾಗುವುದು ಇದಕ್ಕೆ ಅಗತ್ಯವಿರುವ ಕಂಪ್ಯೂಟರ್‌ಗಳನ್ನು ಜೋಡಿಸಲಾಗಿದೆ. ಟೋಕನ್ ನಂಬರ್ ಆಧಾರಿತವಾಗಿ ಅರ್ಜಿಗಳನ್ನು ಕರೆದು ವಿಚಾರಣೆಯನ್ನು ನಡೆಸಲಾಗುವುದು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹೆಲ್ಪ್ ಡೆಸ್ಕ್ನ್ನು ಸಹ ತೆರೆಯಲಾಗಿದೆ.

ಈಗಾಗಲೇ ಪ್ರತಿ ಕೌಂಟರ್ ಗೆ ಇಬ್ಬರಂತೆ ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಭಂದಿಗಳನ್ನು ನಿಯೋಜಿಸಲಾಗಿದೆ ಇವುಗಳ ಮೇಲುಸ್ತುವರಿ ನೋಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಮಾಧ್ಯಮದವರಿಗೆ ಕೂರಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸರ್ಕಾರಿ ಕೆಲಸಗಳಲ್ಲಿ ವಿಳಂಬ ತೊಂದರೆ ಅಥವಾ ದುರಾಡಳಿತಕ್ಕೆ ಒಳಗಾಗಿದ್ದರೆ ಈ ಅಹವಾಲು ಸ್ವೀಕರದ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.