



ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ , ಸನ್ಮಾನ ಸಮಾರಂಭ ಹಾಗೂ ಪದಾಧಿಕಾರಿಗಳ ಆಯ್ಕೆ
ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಅಕ್ಟೋಬರ್ 5 ರಂದು ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿತು.21_ 22-,ಸಾಲಿನ ಅಧ್ಯಕ್ಷರಾಗಿ ಕಿಶೋರ್ ಆರ್ ಆಚಾರ್ಯ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು,ಪ್ರ.ಕಾರ್ಯದರ್ಶಿಯಾಗಿ ಪ್ರಶಾಂತ ಆಚಾರ್ಯ ನೇಜಾರು,ಕೋಶಾಧಿಕಾರಿಯಾಗಿ ರವಿಚಂದ್ರ ಆಚಾರ್ಯ, ಉಪಾಧ್ಯಕ್ಷ ರಾಗಿ ಪ್ರಭಾಕರ ಆಚಾರ್ಯ ಹಾಗೂ ನೂತನ ಪದಾಧಿಕಾರಿಗಳು ಆಯ್ಕೆಯಾದರು. ಸಂಘದ ಅಧ್ಯಕ್ಷರಾದ ಕಿಶೋರ್ ಆರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಮಲಬಾರ್ ಗೋಲ್ಡ್ ಮ್ಯಾನೇಜರ್ ರಾಘವೇಂದ್ರ ನಾಯಕ್,ಅಖಿಲ ಭಾರತ ಸ್ವರ್ಣಕಾರ ಸಂಘದ ಸದಸ್ಯರು ಅರುಣ್ ಜಿ ಶೇಟ್,ಸಂಘದ ಗೌರವ ಅಧ್ಯಕ್ಷರು ಅಲೆವೂರು ಸುಂದರ ಆಚಾರ್ಯ. ಉಪಾಧ್ಯಕ್ಷ ಟಿ ಜಿ ಪ್ರಭಾಕರ ಆಚಾರ್ಯ ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರಾಜೇಶ ಆಚಾರ್ಯ, ಕಾರ್ಕಳ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಅಧ್ಯಕ್ಷ ಕಿಶೋರ್ ಆಚಾರ್ಯ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು ಸ್ವಾಗತಿಸಿದರು.ಹಿರಿಯ ಕುಶಲಕರ್ಮಿಗಳಾದ ಬಿ ಕೇಶವ ಆಚಾರ್ಯ ಹಾಗೂ ಶ್ರೀನಿವಾಸ ಶೇಟ್,ಸಮಾಜ ಸೇವಕರಾದ ಶಶಿಧರ ಪುರೋಹಿತರು, ನಾಗಾರ್ಜುನ ಪೂಜಾರಿ, ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ ಸುಪ್ರೀತ್ ಆಚಾರ್ಯ, ಪಂಚಾಯತ್ ಸದಸ್ಯರಾದ ನಮ್ಮ ಸಂಘದ ಪ್ರ ಕಾರ್ಯದರ್ಶಿ ಪ್ರಶಾಂತ ಆಚಾರ್ಯ ನೇಜಾರು ಇವರುಗಳನ್ನು ಸಮ್ಮಾನಿಸಲಾಯಿತು.ಕೋಶಾಧಿಕಾರಿ ರವಿಚಂದ್ರ ಆಚಾರ್ಯ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮ ನಿರೂಪಣೆ ಹರೀಶ್ ಆಚಾರ್ಯ ಉಪ್ಪೂರು ಮಾಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.