logo
WhatsApp Image 2026-04-02 at 14.46.04.jpeg
hindalco everlast.jpeg

ರಕ್ತ ದಾನದಲ್ಲಿ ಉಡುಪಿ ಜಿಲ್ಲೆ ಮುಂದೆ.ಡಾಕ್ಟರ್ ಮಧುಸೂದನ ನಾಯಕ್

ಟ್ರೆಂಡಿಂಗ್
share whatsappshare facebookshare telegram
3 Apr 2022
post image

ಕಾರ್ಕಳ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ದಾನವೆ ನಿಜವಾದ ದಾನ. ಅದರಲ್ಲಿ ರಕ್ತದಾನ ಪ್ರಮುಖವಾದುದು. ಉಡುಪಿ ಜಿಲ್ಲೆ ರಕ್ತದಾನದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯು ಹಲವು ಬಾರಿ ರಾಜ್ಯ ಪ್ರಶಸ್ತಿ ಪಡೆದಿದೆ ಎಂದು ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾಕ್ಟರ್ ಮಧುಸೂದನ ನಾಯಕ್ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಕಳ ಶಾಖೆ ವತಿಯಿಂದ ರೆಡ್ ಕ್ರಾಸ್ ಸಪ್ತಾಹದ ಅಂಗವಾಗಿ ಏಪ್ರಿಲ್ 3ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಗತಿಸಿ, ಪ್ರಸ್ತಾವನೆ ಗೈದ ಸಂಸ್ಥೆಯ ಕಾರ್ಕಳ ಶಾಖೆಯ ಸಭಾಪತಿ ಡಾಕ್ಟರ್ ಕೆ. ರಾಮಚಂದ್ರ ಜೋಶಿ ಅವರು ಮಾತನಾಡಿ, ಕಾರ್ಕಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ಆರಂಭವಾದ ಬಳಿಕ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಸಂಸ್ಥೆ ಆರಂಭವಾಗಿ ಕಳೆದ 4 ವರ್ಷಗಳಲ್ಲಿ ಸುಮಾರು 2,000 ಯೂನಿಟ್ ರಕ್ತ ಸಂಗ್ರಹಿಸಿದೆ. ಇದರಿಂದ ಸುಮಾರು 5,000 ಕೂ ಹೆಚ್ಚಿನ ಜನರಿಗೆ ಪ್ರಯೋಜನವಾಗಿದೆ ಎಂದರು. ಸಂಸ್ಥೆಯ ಕುಂದಾಪುರ ಶಾಖೆ ಸಭಾಪತಿ ಜಯಕರ ಶೆಟ್ಟಿ, ಕೋಶಾಧಿಕಾರಿ ಶಿವರಾಂ ಶೆಟ್ಟಿ, ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾಕ್ಟರ್ ಮಂಜುನಾಥ ಕೋಟ್ಯಾನ್, ಕುಕ್ಕುಂದೂರು ಗಣಿತ ನಗರ ಶ್ರೀ ಪದ್ಮ ಗೋಪಾಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾಕ್ಟರ್ ಸುಧಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೃಷಭ ರಾಜ್ ಕಡಂಬ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತೊಂಜೀಕಟ್ಟೆ ವನಜಾ ಪೂಜಾರ್ತಿ, ನಿಟ್ಟೆ ಪದವು ದೇವು, ಬೇಲಾಡಿಯ ಸಂಪ ಮೂಲ್ಯ, ಗಾಂಧೀ ಮೈದಾನದ ಮಾಧವ ಶೆಟ್ಟಿಗಾರ್ ಮತ್ತು ಬೇಳ್ವೆಯ ಸದಿಯಾ ಅವರಿಗೆ ತಲಾ 10 ಸಾ. ರೂ. ಮೌಲ್ಯದ ವೀಲ್ ಚಕ್ರ ವಿತರಿಸಲಾಯಿತು. 4 ವರ್ಷಗಳ ಕಾಲ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಡಾಕ್ಟರ್ ರಾಮಚಂದ್ರ ಜೋಶಿ ಅವರನ್ನು ಸಮ್ಮಾನಿಸಲಾಯಿತು. ಉಪಸಭಾಪತಿ ಶೇಖರ್ ಹೆಚ್. ಸ್ವಾಗತಿಸಿದರು. ಶ್ವೇತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.