logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ ದೊಡ್ಡಣ್ಣ ಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಜೋಡಿ ಲಲಿತ ಸಹಸ್ರ ಕದಳಿಯಾಗ ಸಂಪನ್ನ

ಟ್ರೆಂಡಿಂಗ್
share whatsappshare facebookshare telegram
20 Oct 2023
post image

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಸೇವ್ ಆರ್ತಿಗಳ ಸಮಕ್ಷಮದಲ್ಲಿ ಸಂಪನ್ನಗೊಂಡಿತು. ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರುಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾನಯಾಗವು ಬಹು ಫಲಪ್ರದವಾದದು.. ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮದುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಆಕೆಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ ಬಗೆ ಬಗೆಯ ನೈವೇದ್ಯವನ್ನಿಟ್ಟು ಭೂಮಂಡಲದ ಒಡತಿಯಾದ ರಾಜರಾಜೇಶ್ವರಿಯ ಅನುಗ್ರಹವನ್ನು ಯಾಚಿಸುವ ಯಾಗವನ್ನು ಮುಂಬೈಯ ಖ್ಯಾತ ಜಿಮ್ ಟ್ರೈನರ್ ವಿನೋದ್ ಜನ್ನ ಹಾಗೂ ಪ್ರಜ್ಞಾ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸ ಸಮರ್ಪಿಸಲಾಯಿತು... ಬ್ರಾಹ್ಮಣ ಸುವಾಸಿನಿಯರ ಆರಾಧನೆ ಹನಿಕಾರಾದನೆ ನೆರವೇರಿತು.. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಲಲಿತ ಅಂಬಿಕೆಯಾಗಿ ಗಿಳಿ ಹಸಿರು ಬಣ್ಣದ ಸೀರೆಯನ್ನುಟ್ಟು ಕಬ್ಬಿನ ಜಲ್ಲೆಯ ಮಧ್ಯದಲ್ಲಿ ಎದ್ದು ಬರುವಂತೆ ಲಲಿತಾಂಬಿಕೆಯಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.. ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ವಿವಿಧ ನೃತ್ಯ ತಂಡದ ನೃತ್ಯಾರ್ಥಿಗಳಿಂದ ಸಮರ್ಥಿಸಲ್ಪಟ್ಟಿತು. ಶ್ರೀ ಮಾತಾ ಭಜನಾ ಮಂಡಳಿ ಡಾಕ್ಟರ್ ಅರವಿಂದ ಹೆಬ್ಬಾರ್ ಸಮನ್ವಿ ಅರ್ಚನಾ ಭಕ್ತಿ ಸಂಗೀತ ಕಾರ್ಯಕ್ರಮ ನೀಡಿದರು ಕಾಲಭೈರವ ನೃತ್ಯ ತಂಡ ಮತ್ತು ವಿದುಷಿ ಶ್ರಾವ್ಯ ಕುಮಾರಿ ಅವರಿಂದ ನೃತ್ಯ ವೈವಿಧ್ಯ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿ ಬಂತು.. ಮಧ್ಯಾಹ್ನ ಹಾಗೂ ರಾತ್ರಿ ಸಾಸ್ತ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದುರ್ಗಾ ನಮಸ್ಕಾರ ಪೂಜೆ ರಂಗ ಪೂಜೆ ಶ್ರೀ ದಿನೇಶ್ ರತ್ನ ಉದ್ಯಾವರ ದಂಪತಿಗಳು ಹಾಗೂ ಅಕ್ಷತಾ ರತಿಶ ಶೆಟ್ಟಿ, ಮುಂಬೈ ಇವರ ಪರವಾಗಿ ಸಮರ್ಪಿಸಲ್ಪಟ್ಟಿತು ಸಹಸ್ರ ಕದಳಿಯಾಗದಲ್ಲಿ ನಿರೀಕ್ಷೆಗೂ ಮೀರಿದ ಭಕ್ತರುಗಳು ಪಾಲ್ಗೊಂಡರು ಯಾಗ ಅಬೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ. ಅತಿ ಶ್ರೇಷ್ಠವೂ ಪುರಾತನವೂ ಆದ ಸನಾತನ ಧರ್ಮದ ಅಗಾಧತೆ ವರ್ಣಿಸಲ ಸಾದ್ಯ ಸಹಸ್ರಾರ್ವರ್ಷ ತಪ್ಪಗೈದಂತಹ ಮುನಿಶ್ರೇಷ್ಠರುಗಳು ದೇವಾನುದೇವತೆಗಳನ್ನು ಒಲಿಸಿಕೊಳ್ಳುವ ಹಲವಾರು ವಿಧಾನವನ್ನು ಪ್ರಪಂಚ ಮುಖಕ್ಕೆ ಅರ್ಪಣೆಗೊಳಿಸಿದ್ದಾರೆ.. ಜಪ ತಪ ದ ಜೊತೆಗೆ ಅಗ್ನಿ ಮುಕೇನ ಆಹುತಿಯನ್ನು ನೀಡಿ ದೇವಾನುದೇವತೆಗಳನ್ನು ಸಂತೃಪ್ತಿಗೊಳಿಸಿ ಇಚ್ಛಿತ ಫಲವನ್ನು ಪಡೆಯುವ ಪ್ರಕ್ರಿಯೆಯೇ ಯಾಗ. ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ಶ್ರೀ ಹಯಗ್ರೀವರು ಅಗಸ್ತ್ಯ ಋಷಿಯೊಂದಿಗೆ ನಡೆಸಿದ ಸಂವಾದವೇ ಶ್ರೀ ಲಲಿತಾ ಸಹಸ್ರನಾಮ.. ಅತ್ಯಂತ ನಿಗೂಢವಾದ ಲಲಿತಾಂದವಿಕೆಗೆ ಈ ಮಂತ್ರವು ಅಕ್ಕರೆಯುಳ್ಳದ್ದಾಗಿದೆ. ಈ ಮಂತ್ರ ರಹಸ್ಯಾತ್ಮಕವಾದದ್ದು ಆದ್ದರಿಂದ ಇದಕ್ಕೆ ಸದೃಶವಾದ ಮಂತ್ರ ಹಿಂದೆಯೂ ಇರಲಿಲ್ಲ ಮುಂದೆಯೂ ಇರಲು ಸಾಧ್ಯವಿಲ್ಲ.. ಜೀವಿತಕಾಲದಲ್ಲಿ ಒಮ್ಮೆಯಾದರೂ ಲಲಿತಾರಾಧನೆ ಮಾಡಿದರೆ ಅದರ ಪುಣ್ಯ ವಿವರಿಸಲು ಶಿವನಿಂದಲೂ ಸಾಧ್ಯವಿಲ್ಲ. ಅಂತಹ ಪುಣ್ಯಪ್ರದವಾದ ಲಲಿತಾಂಬಿಕೆ ಮಂಗಳಕರವಾದ ಫಲವನ್ನು ನೀಡುವವಳು.. ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಯಾಗ ಸಂಪನ್ನಗೊಳ್ಳುತ್ತಿದ್ದು ಭುಗತಗೊಂಡಿದಂತಹ ಶಕ್ತಿ ಕ್ಷೇತ್ರದಲ್ಲಿ ಪುನೀತ್ ಶ್ರೇಷ್ಠರಿಂದ ಶ್ರೀ ಚಕ್ರ ಆರಾಧನೆ ನೆರವೇರುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ.. ಯಾಗದಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳ್ಳೆಯದಾಗಲಿ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.