logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ : ಕೃಷಿ ಇಲಾಖೆಯ ವತಿಯಿಂದ ಇ-ಕೆವೈಸಿ ಶಿಬಿರ

ಟ್ರೆಂಡಿಂಗ್
share whatsappshare facebookshare telegram
28 Jun 2023
post image

ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಇ-ಕೆವೈಸಿ ಮಾಡಿಸಲು ಕುಂದಾಪುರ ತಾಲೂಕಿನ ಕುಂದಾಪುರ, ವಂಡ್ಸೆ ಮತ್ತು ಬೈಂದೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಈ ಕೆಳಕಂಡ ದಿನಗಳಲ್ಲಿ ಇ-ಕೆವೈಸಿ ಶಿಬಿರಗಳನ್ನು ಕೈಗೊಳ್ಳಲಾಗುವುದು. ಕುಂದಾಪುರ ಹೋಬಳಿಯಲ್ಲಿ ಜೂನ್ 23 ರಂದು ಆನಗಳ್ಳಿ, ಜಪ್ತಿ, ಹೊಂಬಾಡಿ ಮಂಡಾಡಿ ಹಾಗೂ ಹೆಂಗವಳ್ಳಿ, 24 ರಂದು ಕೋಟೇಶ್ವರ, ಬಸ್ರೂರು ಹಾಗೂ ಯಡ್ಯಾಡಿ ಮತ್ಯಾಡಿ, 25 ರಂದು ಬೇಳೂರು, 26 ರಂದು ಅಮಾಸೆಬೈಲ್ ಹಾಗೂ ರಟ್ಟಾಡಿ, 28 ರಂದು ಹಂಗಳೂರು ಮತ್ತು 30 ರಂದು ಕಂದಾವರ.

ಬೈAದೂರು ಹೋಬಳಿಗೆ ಸಂಬಂಧಿಸಿದಂತೆ , ಜೂನ್ 23 ರಂದು ಕಾಲ್ತೋಡು, 26 ರಂದು ತೆಗ್ಗರ್ಸೆ, ಪಡುವರಿ, ಯಡ್ತೆರೆ ಹಾಗೂ ಬಿಜೂರು, 27 ರಂದು ಶಿರೂರು, ಬೈಂದೂರು ಹಾಗೂ ಕಿರಿಮಂಜೇಶ್ವರ ಮತ್ತು 30 ರಂದು ಹಳ್ಳಿಹೊಳೆ. ವಂಡ್ಸೆ ಹೋಬಳಿಯಲ್ಲಿ ಜೂ. 24ರಂದು ಕಾವ್ರಾಡಿ ಹಾಗೂ ಹಳ್ನಾಡು, 26 ರಂದು ತಲ್ಲೂರು ಹಾಗೂ ಕರ್ಕುಂಜೆ, 27 ರಂದು ಸಿದ್ದಾಪುರ ಹಾಗೂ ಶಂಕರ ನಾರಾಯಣ, 28 ರಂದು ಹೆಮ್ಮಾಡಿ ಹಾಗೂ ಕಟ್ಬೇಳ್ತೂರು, 29 ರಂದು ತ್ರಾಸಿ ಹಾಗೂ ಹೊಸಾಡು ಮತ್ತು 30 ರಂದು ಉಳ್ಳೂರು 74 ಹಾಗೂ ಕುಳಂಜೆ ಗ್ರಾಮಗಳಲ್ಲಿ ಇ- ಕೆವೈಸಿ ಶಿಬಿರ ನಡೆಯಲಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.