



ಉಡುಪಿ: ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕಳುಹಿಸಿದ ಜಿ-ಮೇಲ್ ಸಂದೇಶವನ್ನು ನಂಬಿ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೈಕಾಣ ಎಂಬಲ್ಲಿ ನಡೆದಿದೆ.
ವಂಡ್ಸೆ ಗ್ರಾಮದ ಕೈಕಾಣ ನಿವಾಸಿ ಅನುಷಾ (21) ವಂಚನೆಗೊಳಗಾದ ಯುವತಿ. ಇವರಿಗೆ 2021 ನೇ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ಜಿ-ಮೇಲ್ ಸಂದೇಶವೊಂದು ಬಂದಿತ್ತು.
ಅದರಲಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದು, ಆಗ ಪರಿಚಿತ ವ್ಯಕ್ತಿ ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರೇ ಚಾರ್ಜ್ ಎಂದು ಹೇಳಿ ಅನುಷಾ ಅವರಿಂದ ಗೂಗಲ್ ಪೇ ಮೂಲಕ ₹65 ಸಾವಿರ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಆ ಬಳಿಕ ವಂಚಕರು ₹25 ಲಕ್ಷ ಬಹುಮಾನ ಗೆದ್ದಿದ್ದೀರಿ ಎಂಬುದಾಗಿ ವಾಟ್ಸ್ ಅಪ್ ನಲ್ಲಿ ಅನುಷಾ ಅವರಿಗೆ ಸಂದೇಶವನ್ನು ಕಳುಹಿಸಿದ್ದು, ಅದನ್ನು ನಂಬಿದ ಅನುಷಾ ವಂಚಕರ ಬ್ಯಾಂಕ್ ಖಾತೆಗೆ ಮತ್ತೆ ₹ 5,01,540 ಹಣ ಪಾವತಿಸಿದ್ದಾರೆ.
ವಂಚಕರು ಉದ್ಯೋಗ ಭರವಸೆ ಹಾಗೂ ಬಹುಮಾನದ ಗೆದ್ದಿದ್ದೀರಿ ಎಂದು ನಂಬಿಸಿ ಅನುಷಾ ಅವರಿಂದ ಒಟ್ಟು ₹ 5,66,540 ದೋಚಿ ಮೋಸ ಮಾಡಿದ್ದಾರೆ. ಈ ಬಗ್ಗೆ ಅನುಷಾ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.