logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಫೆ. 22 ರಿಂದ ಮಾರ್ಚ್ 05 ರವರೆಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರಯಾಗ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
21 Feb 2023
post image

ಉಡುಪಿ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿದ್ದು ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು

ಕಾರ್ಯಕ್ರಮಗಳ ವಿವರ

22 ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಕು. ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7 ರಿಂದ ‘ಯಕ್ಷ ಗಾಯನ ವೈಭವ' - ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ

23 ಗುರುವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಉಪನ್ಯಾಸ : ಕು. ಹಾರಿಕಾ ಮಂಜುನಾಥ್, ಬಾಲ ವಾಗ್ಮಿ, ಬೆಂಗಳೂರು ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7 ರಿಂದ 8 ಭಕ್ತಿ ಸಂಗೀತ - ವಿದುಷಿ ಉಮಾಶಂಕರಿ ಉದಯಶಂಕರ್ ಮತ್ತು ಬಳಗದವರಿಂದ ಸರಿಗಮ ಭಾರತಿ ಸಂಗೀತ ವಿದ್ಯಾಲಯ, ಪರ್ಕಳ ರಾತ್ರಿ 8ರಿಂದ : ಹರಿಕಥೆ - ದಕ್ಷ ಯಜ್ಞ ಹರಿದಾಸರು: ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ

24 ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಶ್ರೀ ಸೂರ್ಯನಾರಾಯಣ ಭಟ್, ಕಶೆಕೋಡಿ, ಸದಸ್ಯರು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7ರಿಂದ "ಶಿವ ಗಾನಾಮೃತ" - ತುಳುನಾಡ ಗಾನ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗ

25 ಶನಿವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಶ್ರೀ ಅಜಿತ್ ಹನುಮಕ್ಕನವರ, ಸುವರ್ಣ ನ್ಯೂಸ್ ಚಾನೆಲ್‌ನ ಸುದ್ದಿ ವಿಭಾಗದ ಮುಖ್ಯಸ್ಥರು ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7ರಿಂದ "ಭಕ್ತಿ ಗಾನ ಸಿಂಚನ" - ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧ ಭಟ್, ಸುನೀತಾ ಭಟ್ ಕೂಡುವಿಕೆಯಲ್ಲಿ 8.30 ರಿಂದ : ರಾಷ್ಟ್ರದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ "ಪುಣ್ಯ ಭೂಮಿ ಭಾರತ" (ಆದರ್ಶ್ ಗೋಖಲೆ ಅವರ ನಿರೂಪಣೆಯಲ್ಲಿ) ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್

26 ಆದಿತ್ಯವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಜಿಲ್ಲಾ ಸಮಿತಿ ಸದಸ್ಯರು, ಹಿಂದೂ ಜಾಗರಣ ವೇದಿಕೆ, ಉಡುಪಿ ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7 ರಿಂದ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್, ಬೆಂಗಳೂರು ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ "ಮಹಾರುದ್ರ" ರಾತ್ರಿ 8.30 ರಿಂದ : ನೃತ್ಯ ರೂಪಕ - ನಾರಸಿಂಹ (ಒಳಿತಿನ ವಿಜಯದ ಕಥನ) - ನೃತ್ಯ ನಿಕೇತನ, ಕೊಡವೂರು ರಚನೆ : ಶ್ರೀಮತಿ ಸುಧಾ ಆಡುಕಳ ನಿರ್ದೇಶನ : ಡಾ| ಶ್ರೀಪಾದ ಭಟ್ ನೃತ್ಯ ನಿರ್ದೇಶನ : ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ

27 ಸೋಮವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ಅಖಿಲ ಭಾರತೀಯ ಜ್ಞಾನ ಭಾರತಿ ಪ್ರಕಾಶನ ನಿಯಮಿತ, ಮಂಗಳೂರು ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7ರಿಂದ ಏಕಾದಶ ವೀಣಾ ವಾದನ : ವಿದುಷಿ ಪವನಾ ಬಿ. ಆಚಾರ್ಯ ಮತ್ತು ವಿದ್ಯಾರ್ಥಿಗಳು 8.30ರಿಂದ : ಯಕ್ಷಗಾನ ಬಯಲಾಟ ‘ಭೀಷ್ಮ ವಿಜಯ’ - ಸಾಲಿಗ್ರಾಮ ಮೇಳ

28 ಮಂಗಳವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಪ್ರಧಾನ ಭಾಷಣಗಾರರು: ಶ್ರೀ ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7ರಿಂದ ಭರತನಾಟ್ಯ - ವಿದುಷಿ ರೂಪಾ ಕಿರಣ್, ಹಾಂಕಾಂಗ್ ಇವರಿಂದ 8ರಿಂದ : ತುಳು ಪೌರಾಣಿಕ ನಾಟಕ ‘ಬೊಳ್ಳಿ ಮಲೆತ ಶಿವ ಶಕ್ತಿಲು’ ಸಾಯಿ ಶಕ್ತಿ ಕಲಾ ತಂಡ, ಉರ್ವ ಚಿಲಿಂಬಿ, ಮಂಗಳೂರು ಮಾರ್ಚ್ 01 ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಶಿವಧ್ಯಾನದಿಂದ ಧನ್ಯತೆಯ ಜೀವನ ರಾಜಯೋಗಿನಿ ಬಿ.ಕೆ ವೀಣಾ, ಶಿರಸಿ, ಪ್ರಖ್ಯಾತ ಪ್ರೇರಣಾದಾಯಿ, ಆಧ್ಯಾತ್ಮಿಕ ಪ್ರವಚನಕಾರರು ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7ರಿಂದ ಜಾಗೃತಿಗಾಗಿ ಜಾದೂ - ಆಧ್ಯಾತ್ಮಿಕ ಜಾದೂ ಪ್ರದರ್ಶನ ವಿಶ್ವವಿಖ್ಯಾತ ಜಾದೂಗಾರ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ತಂಡ ರಾತ್ರಿ 8ರಿಂದ : ಗಾಳಿಯಲ್ಲಿ ಚಿತ್ತಾರ ಗ್ಲೋ ಆರ್ಟ್ ಖ್ಯಾತಿಯ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಬೆಂಗಳೂರು ಇವರಿಂದ ಬ್ರಶ್ ಕ್ಯಾನ್‌ವಾಸ್ ಇಲ್ಲದೆ ಗಾಳಿಯಲ್ಲಿ ಬಿಡಿಸುವ ಶಿವ ಪರಮಾತ್ಮನ ವರ್ಣರಂಜಿತ ಅನಿಮೇಟ್ ಚಿತ್ತಾರ ವಿಸ್ಮಯ 02 ಗುರುವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5 ರಿಂದ ಧಾರ್ಮಿಕ ಉಪನ್ಯಾಸಕರು : ಶ್ರೀ ಭೀಮೇಶ್ವರ ಜೋಶಿ, ಧರ್ಮದರ್ಶಿಗಳು, ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ 7.30ರಿಂದ : ಭಕ್ತಿಗಾಯನ ಸಂಗೀತ ಶಾರದೆ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ

03 ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ದಿಕ್ಸೂಚಿ ಭಾಷಣ : ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು, ಚಿಕ್ಕಮಗಳೂರು 7.30ರಿಂದ : ಸಂಗೀತ ಕಾರ್ಯಕ್ರಮ ಪ್ರಸಿದ್ಧ ಶಾಸ್ತ್ರೀಯ ಗಾಯಕ ಶ್ರೀ ಜಯತೀರ್ಥ ಮೇವುಂಡಿ

04 ಶನಿವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಉದ್ಘಾಟನೆ ಮತ್ತು ಆಶೀರ್ವಚನ : ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳವರಿಂದ 7ರಿಂದ : ಪ್ರಸಿದ್ಧ ಟಿವಿ ರಿಯಾಲಿಟಿ ಶೋ 'ಜೀ ಸರಿಗಮಪ' ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ

05 ಆದಿತ್ಯವಾರ ಅಪರಾಹ್ನ 2ರಿಂದ "ಕಾಶ್ಮೀರ ವಿಜಯ" ತಾಳಮದ್ದಲೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.