



ಉಡುಪಿ, ಮಾರ್ಚ್ 24 (ಕವಾ): ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೆöÊನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏ.1 ರಿಂದ 6 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ವೇಳಾಪಟ್ಟಿ ಹೀಗಿದೆ: ಏಪ್ರಿಲ್ 1 ರಂದು ಕೆರಾಡಿ ಗ್ರಾಮ ಪಂಚಾಯತ್‌ನಲ್ಲಿ ಹಳ್ಳಿಹೊಳೆ, ಕೆರಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಚಿತ್ತೂರು ಗ್ರಾಮ ಪಂಚಾಯತ್‌ನಲ್ಲಿ ವಂಡ್ಸೆ, ಚಿತ್ತೂರು, ಆಲೂರು, ಇಡೂರು, ಕುಂಜ್ಙಾಡಿ ಹಾಗೂ ಸುತ್ತಮುತ್ತಲಿನವರಿಗೆ, ಏ.2 ರಂದು ಕರ್ಕುಂಜೆ ಗ್ರಾಮ ಪಂಚಾಯತ್‌ನಲ್ಲಿ ಕರ್ಕುಂಜೆ, ಕಟ್‌ಬೇಲ್ತೂರು ಹಾಗೂ ಸುತ್ತಮುತ್ತಲಿನವರಿಗೆ, ಏ. 3 ರಂದು ತಲ್ಲೂರು ಅಂಬೇಡ್ಕರ್ ಸಭಾಭವನದಲ್ಲಿ ತಲ್ಲೂರು ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಕುಂದಾಪುರ ವಡೇರಹೋಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಕುಂದಾಪುರ, ಹಂಗಳೂರು, ಕೋಡಿ, ಕೋಟೇಶ್ವರ, ಕೋಣಿ ಹಾಗೂ ಸುತ್ತಮುತ್ತಲಿನವರಿಗೆ, ಏ.4 ರಂದು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಬೆಳ್ವೆ, ಅಲ್ಬಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಅಮಾಸೆಬೈಲು ಗ್ರಾಮ ಪಂಚಾಯತ್‌ನಲ್ಲಿ ಶೇಡಿಮನೆ, ಅಮಾಸೆಬೈಲು, ರಟ್ಟಾಡಿ, ಮಡಾಮಕ್ಕಿ ಹಾಗೂ ಸುತ್ತಮುತ್ತಲಿನವರಿಗೆ, ಏ.5 ರಂದು ಹೆಮ್ಮಾಡಿ ಗ್ರಾಮ ಪಂಚಾಯತ್‌ನಲ್ಲಿ ಹೆಮ್ಮಾಡಿ, ಹಕ್ಲಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಹಾಲಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಲಾಡಿ, ಹೆಂಗವಳ್ಳಿ ಹಾಗೂ ಸುತ್ತಮುತ್ತಲಿನವರಿಗೆ, ಏ.6 ರಂದು ಕಾಳಾವಾರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾಳಾವರ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಹುಣ್ಸೆಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಮೊಳಹಳ್ಳಿ, ಹಾರ್ದಳ್ಳಿ, ಮಂಡಳ್ಳಿ, ಹೊಂಬಾಡಿ, ಮಂಡಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವಲಂಬಿತರಿಗೆ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, 18 ರಿಂದ 60 ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.