logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ಸಮರ್ಥ ನಾಯಕತ್ವದಿಂದ ಯುವಶಕ್ತಿಯ ಸದ್ವಿನಿಯೋಗ-ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು

ಟ್ರೆಂಡಿಂಗ್
share whatsappshare facebookshare telegram
15 Oct 2023
post image

ಉಡುಪಿ:ವಿದ್ಯಾರ್ಥಿಗಳಲ್ಲಿ ಇರುವ ಸಮರ್ಥ ನಾಯಕತ್ವದ ಗುಣವು ಸಮಸ್ತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರದೀಪವಾಗುವುದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಸ್ಥೆಯನ್ನು ಸಮಾಜವನ್ನು ಬೆಳೆಸುವಂತಾಗಲಿ ಎಂದು ಉಡುಪಿ ಶ್ರೀ ಅದಮಾರು ಮಠದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟರು. ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಪ್ರೊ.ರಾಜೇಂದ್ರ ಭಟ್ ಅವರು ಮಾತನಾಡುತ್ತಾ, "ಭಾರತದ ಅದ್ಭುತ ಅಂತಃಸತ್ವಕ್ಕೆ ಯುವಸಮೂಹವೇ ಪ್ರೇರಣಾ ಶಕ್ತಿಯಾಗಲಿ.ಶೇಕಡಾ ಅರುವತ್ತಕ್ಕಿಂತಲೂ ಹೆಚ್ಚು ಯುವಶಕ್ತಿಯನ್ನು ಹೊಂದಿದ ನಮ್ಮ ದೇಶ ಭಾರತ, ಆಧುನಿಕ ಜಗತ್ತಿನ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ ಮುನ್ನುಗ್ಗುತ್ತಿದೆ. ಸಂವೇದನಾಶೀಲತೆ ಹಾಗೂ ಮೌಲ್ಯಗಳನ್ನು ಒಳಗೊಂಡ ನಮ್ಮ ಯುವಜನತೆ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸಲಿ" ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ಸಿ.ಎ.ಟಿ ಪ್ರಶಾಂತ್ ಹೊಳ್ಳ ಅವರು ವಹಿಸಿಕೊಂಡಿದ್ದರು.ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ ಅವರು ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ.ಚಂದ್ರಕಾಂತ್ ಭಟ್ ಹಾಗೂ ಶ್ರೀಮತಿ ಲವಿಟಾ ಡಿಸೋಜ,ಹಾಗೂ ಉಪಪ್ರಾಂಶುಪಲರಾದ ಶ್ರೀ ವಿನಾಯಕ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕಿಯಾಗಿ ಶ್ರೀಮತಿ ಸೌಜನ್ಯ, ಪದಾಧಿಕಾರಿಗಳಾಗಿ ಕು.ವಿದ್ಯಾ, ಶ್ರೀ ಸುಮಂತ್, ಶ್ರೀ ಶಶಿಕಿರಣ್ ಇವರು ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಚಂದ್ರಕಾಂತ್ ಭಟ್ ಅವರು ಸ್ವಾಗತಿಸಿ, ಶ್ರೀಮತಿ ಸೌಜನ್ಯ ಅವರು ವಂದಿಸಿದರು‌.ಶ್ರೀ ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.