



ಉಡುಪಿ: ಕನಸು ಕ್ರಿಯೇಷನ್ಸ್ ಪ್ರಸ್ತುತಪಡಿಸುವ “ಗ್ರಸ್ತ” ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ಉಡುಪಿಯ ನವರಸಮ್ ಸ್ಟುಡಿಯೋದಲ್ಲಿ ನಡೆಯಿತು.
ಉಡುಪಿ ನವರಸಮ್ ಸ್ಟುಡಿಯೋದ ಪ್ರವೀಣ್ ಮರ್ಕಮೆ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಶ್ರೀಶ ಎಳ್ಳಾರೆ ನಿರ್ದೇಶನದ ಜವಾಬ್ದಾರಿಯ ಜತೆಗೆ ಕಥೆ, ಸಂಕಲನವನ್ನು ಚಿತ್ರಕ್ಕೆ ಒದಗಿಸಿದ್ದಾರೆ. ಅಭಿಲಾಷ್ ಪೂಜಾರಿ ದೆಂದೂರುಕಟ್ಟೆ ಚಿತ್ರಕಥೆ ಮತ್ತು ಡಿಒಪಿ, ಪ್ರಜ್ವಲ್ ಆಚಾರ್ಯ ಸಹನಿರ್ದೇಶನ, ಪ್ರಜ್ವಲ್ ಸುವರ್ಣ vfx, ಡಬ್ಬಿಂಗ್ ನವರಸಮ್ ಸ್ಟುಡಿಯೋ, ಸಂತೋಷ್ ಪಚ್ಚಾರೆ ಪ್ರಚಾರ ಡಿಸೈನ್ ಒದಗಿಸಿದ್ದಾರೆ.
ಕಿರುಚಿತ್ರದ ಮುಖ್ಯಭೂಮಿಕೆಯಲ್ಲಿ ಶ್ರುತಿನ್ ಎಸ್ ಶೆಟ್ಟಿ, ಶ್ರೀ, ಪ್ರಶಾಂತ್ ಪೂಜಾರಿ, ಅಭಿಲಾಷ್ ಪೂಜಾರಿ, ಶ್ರೀಶ ಎಳ್ಳಾರೆ ಕಾಣಿಸಿಕೊಂಡಿದ್ದಾರೆ.

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.