



ಉಡುಪಿ: ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಪ್ರಪಥಮ ಬಾರಿಗೆ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಸೆ.22 ರಿಂದ ಸೆ.30 ರವರೆಗೆ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಮಾತನಾಡಿದ ಅವರು ಹೆರಿಟೇಜ್ ಚಿನ್ನಾಭರಣಗಳ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹ ಗಳಿವೆ 'ಮೈನ್' ನಲ್ಲಿ ವಜ್ರಾಭರಣಗಳ ಅಭೂತಪೂರ್ವ ಸಂಗ್ರಹ,ನವ ವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಾಮಾಣಿಕೃತ ವಜ್ರಾಭರಣಗಳು, 'ಡಿವೈನ್' ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಚಿನ್ನಾಭರಣಗಳ ಸಂಗ್ರಹ, 'ಪ್ರಶಿಯಾ' ದಲ್ಲಿ ರುಬಿ,ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು,'ಎಥಿನಿಕ್ಸ್' ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ,'ಏರ' ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹಗಳಿವೆ ಎಂದು ವಿವರಿಸಿದರು. ಸಂಪೂರ್ಣ ಪಾರದರ್ಶಕ,ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ,ಬೈ ಬ್ಯಾಕ್ ಗ್ಯಾರಂಟಿ,ಉಚಿತ ವಿಮೆ,ಎಲ್ಲಾ ಆಭರಣ ಸಹ ಹಾಲ್ ಮಾರ್ಕ್ ಹೊಂದಿದ್ದು,28 ರೀತಿಯ ಪರೀಕ್ಷೆ ಮಾಡಿದ ಐ ಜಿ ಐ ಮತ್ತು ಜಿ.ಐ.ಏ ಪ್ರಾಮಾಣಿಕೃತ ವಜ್ರಾಭರಣಗಳು,ಮದುವೆ ಖರೀದಿಗಳಿಗಾಗಿ ಮುಂಗಡ 5% ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಿ ಆಗುವ ಏರಿಳಿತದಿಂದ ಸಂರಕ್ಷಿಸ ಬಹುದು ಇದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವಿಶೇಷತೆಗಳಾಗಿವೆ,ಈ ಪ್ರದರ್ಶನದಲ್ಲಿ ಹೊಸದಾಗಿ ಅನಾವರಣಗೊಂಡ 'ಎಲಾರ' ಕಲೆಕ್ಷನ್,ಬ್ರಾಂಡೆಡ್ ವಾಚ್ ಗಳಾದ ರಾಡೋ,ಟಿಸ್ಸೋಟ್,ಸಿಕೊ,ಟೈಮಾಕ್ಸ್,ಫೋಝಿಲ್ ಗೆ ಶೇಕಡ 30 ರಷ್ಟು ಕಡಿತ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.