



ಉಡುಪಿ: ಕಸಾಪ ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗು ಉದ್ಘಾಟನಾ ಸಮಾರಂಭವು ಮಾರ್ಚ್12, ಶನಿವಾರ ಸಂಜೆ 6.30ಕ್ಕೆ ಉಡುಪಿ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಜರಗಲಿದೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿಕೊಳ್ಳಲಿದ್ದಾರೆ.
ಉದ್ಘಾಟಕರಾಗಿ ಲೇಖಕ ಹಾಗೂ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಮುಖ್ಯ ಅಭ್ಯಾಗತರಾಗಿ ಮಣಿಪಾಲ ಯುನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೋ. ನೀತಾ ಇನಾಂದಾರ್ ಆಗಮಿಸಲಿದ್ದಾರೆ.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ ಕೋಟ ಹಾಗು ನಿಯೋಜಿತ ಘಟಕಾಧ್ಯಕ್ಷ ರವಿರಾಜ್ ಹೆಚ್. ಪಿ. ಉಪಸ್ಥಿತರಿರುವರು.
ಪ್ರಾರಂಭದಲ್ಲಿ ಕನ್ನಡ ಗೀತಗಾಯನ, ಹಾಗು ನೃತ್ಯ ಸಂಭ್ರಮವಿರಲಿದೆ. 6.45ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಪ್ರಾರಂಭವಾಗಿ ಗಂಟೆ 8.00ಕ್ಕೆ ಮುಗಿಯಲಿದೆ. ಬಳಿಕ ಭೋಜನ ವ್ಯವಸ್ಥೆ ಇದೆ ಎಂದು ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಹಾಗು ರಂಜನಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.