



ಉಡುಪಿ: ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕ್ಲೆಮೇಟ್ ರೆಸಿಲಿಯನ್ಸ್ ಅಂಡ್ ಸಸ್ಟೆನಬಲ್ ಡೆವಲಪ್‌ಮೆಂಟ್ ವಿಷಯದ ಮೇಲೆ ನವೆಂಬರ್ 22 ರಿಂದ 24 ರ ವರೆಗೆ ರಾಷ್ಟ್ರಿಯ ಸಮ್ಮೇಳನವನ್ನು ಬೆಂಗಳೂರು ವಿದ್ಯಾರಣ್ಯಪುರದ ಪ್ರೊ.ಯು.ಆರ್ ವಿಜ್ಞಾನ ಭವನದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ. ಸಮ್ಮೇಳನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಸಂಶೋಧಕರು/ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು/ ಉಪನ್ಯಾಸಕರು ಭಾಗವಹಿಸಬಹುದಾಗಿದ್ದು, ನಿಗಧಿತ ಶುಲ್ಕ ಪಾವತಿಸಿ ನವೆಂಬರ್ 15 ರ ಒಳಗೆ https://forms.gle/VBZdYHcawb4uU9Jb9 ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್ www.kstacademy.in ಅಥವಾ ಮೊ.ನಂ:9845258894 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.