



ಉಡುಪಿ: ಐಸಿರಿ ಕ್ಲಿನಿಕ್ ಹಾಗೂ ಇಂದ್ರಾಣಿ ಮೆಟರ್ಮಿಟಿ ಕ್ಲಿನಿಕ್ ನ ಉದ್ಘಾಟನೆ ಸಮಾರಂಭವು ಜ.14ರಂದು ನಡೆಯಿತು.ಉಡುಪಿ ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಮೀಪದ ಐಸಿರಿ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ವೈದ್ಯಕೀಯ ಸೇವೆ ಅತಿ ಮಹತ್ವ ವಾಗಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಹಾಗೂ ವೈದ್ಯಕೀಯ ಸೇವೆ ಸಕಾಲದಲ್ಲಿ ದೊರೆಯುವಂತಾಗಲಿ ಎಂದರು.

ವೇದಮೂರ್ತಿ ವೇದವ್ಯಾಸ ಐತಾಳ್ ಆಶಿರ್ವಚನ ನೀಡಿ ಸಂಸ್ಥೆ ಗೆ ಶುಭಹಾರೈಸಿದರು .

ಮುಖ್ಯ ಅತಿಥಿ ಉಡುಪಿ ನಗರಸಭೆ ಕೌನ್ಸಿಲರ್ ಕೆ ರಾಜು ಮಾತನಾಡಿ ನಮಗೆಲ್ಲರಿಗೂ ಎದುರಾಗುವ ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಸಮಸ್ಯೆಗಳಿಂದ ವೈದ್ಯರು ನಮ್ಮನ್ನು ರಕ್ಷಿಸುತ್ತಾರೆ. ನಮ್ಮ ಬದುಕಿನ ಗುಣಮಟ್ಟ ಹೆಚ್ಚಿಸಿಕೊಂಡು, ಆನಂದದಿಂದ ಬದುಕಲು ನೆರವಾಗುತ್ತಾರೆ ಎಂದರು ಡಾ. ಕೃಷ್ಣ ಮೂರ್ತಿ ,ಶ್ರೀ ಮತಿ ಭಾರತಿ, ಅಶೋಕ್ ನಾಯ್ಕ್ , ಗಿರೀಶ್ ಕಾಂಚನ್ ಶುಭಾಶಯ ತಿಳಿಸಿದರು. ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಕೆ, ಸ್ತ್ರೀ ರೋಗ ತಜ್ಞೆ ಶ್ರೀಮತಿ ವಿಜಯಾ ರಾವ್ ವೈ ಬಿ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.