



ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು ಕಾರ್ಯಕ್ರಮದಡಿ ವೈಯಕ್ತಿಕ ನೀರು ಸಂಗ್ರಹಣಾ ವಿನ್ಯಾಸ, ಅಂತರ್ಜಲ ಸುರಕ್ಷಿತ ಪ್ರದೇಶಗಳಲ್ಲಿ ಅಲ್ಪ/ ಮದ್ಯಮ ಆಳದ ಕೊಳವೆ ಬಾವಿಗಳು (ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಅಧಿಸೂಚನೆಯಾಗಿರುವ ಶೋಷಿತ ನಿರ್ಣಾಯಕ ಮತ್ತು ಅರೆ ನಿರ್ಣಾಯಕ ಪ್ರದೇಶಗಳನ್ನು ಹೊರತುಪಡಿಸಿ), ಸಣ್ಣ ಬಾವಿಗಳ ಮರುಸ್ಥಾಪನೆ/ ನವೀಕರಣ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮರು ಪೂರಣ, ಪೈಪ್/ ಪ್ರಿ-ಕಾಸ್ಟ್ ವಿತರಣಾ ವ್ಯವಸ್ಥೆ ಹಾಗೂ ನೀರೆತ್ತುವ ಸಾಧನಗಳು (ವಿದ್ಯುತ್, ಡೀಸೆಲ್, ಪವನ/ಸೌರ) ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು, ಸದ್ರಿ ಚಟುವಟಿಕೆಗಳನ್ನು ಗರಿಷ್ಠ 75,000 ರೂ. ಮಿತಿಗೆ ಒಳಪಟ್ಟು ಸೌಲಭ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.