



ಉಡುಪಿ: ವಿಶ್ವದೆಲ್ಲೆಡೆ ಪ್ರಸಿದ್ಧವಾಗಿರುವ ಉಡುಪಿ ಪುತ್ತಿಗೆ ಮಠದ ಪರ್ಯಾಯೋತ್ಸವ ಜ.17 ಮತ್ತು 18ರಂದು ನಡೆಯಲಿದ್ದು, ಇದೀಗ ಅಂತಿಮ ಹಂತದ ಸಿದ್ದತೆಯಾಗುತ್ತಿದೆ. ಈ ಬಾರಿ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂಧ್ರತೀರ್ಥಶ್ರೀಪಾದರು ಕೃಷ್ಣ ಪೂಜೆಯನ್ನು ಕೈಗೊಳ್ಳಲು ಅಣಿಯಾಗಿದ್ದಾರೆ. ಭಾರತ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡಾ ಸನಾತನ ಹಿಂದೂ ಧರ್ಮವನ್ನು ಪ್ರಚುರಪಡಿಸಿ ಅಮೆರಿಕಾ, ಇಂಗ್ಲಂಡ್ ಮಾತ್ರವಲ್ಲದೇ ಇತರ ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಮಂದಿರ, ಮಠಗಳನ್ನು ಸ್ಥಾಪಿಸಿರುವ ಪುತ್ತಿಗೆ ಶ್ರೀಪಾದರು ಈ ಬಾರಿ ನಾಲ್ಕನೇ ಬಾರಿಗೆ ಪರ್ಯಾಯ ಪೀಠವನ್ನೇರಲಿದ್ದಾರೆ.
ಪುತ್ತಿಗೆ ಪರ್ಯಾಯಕ್ಕೆ ಈಗಾಗಲೇ ಉಡುಪಿಯಲ್ಲಿ ಭರದ ತಯಾರಿಗಳು ನಡೆದಿದ್ದು ಅಂತಿಮ ಹಂತದಲ್ಲಿವೆ. ಈ ಬಾರಿ ಪುತ್ತಿಗೆ ಶ್ರೀಪಾದರು ತಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದು ಘೋಷಿಸಿದ್ದು, ಭಗವ್ದಗೀತೆಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕೋಟಿ ಗೀತಾಲೇಖನ ಯಜ್ಞದಂತಹ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಾರಿ ನಗರಾಲಂಕಾರಕ್ಕೆ ವಿಶೇಷ ಒತ್ತನ್ನು ಪರ್ಯಾಯ ಸ್ವಾಗತ ಸಮಿತಿ ನೀಡಿದ್ದು ಪರ್ಯಾಯದ ದಿನ ದಂಡತೀರ್ಥದಿಂದ ಉಡುಪಿಗೆ ಆಗಮಿಸುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ, ನಗರದ ಎಲ್ಲಾ ರಸ್ತೆಗಳಿಗೆ ವಿದ್ಯುತ್ ದೀಪಗಳ ಅಲಂಕಾರ, ಮತ್ತು ಇನ್ನಿತರ ಯೋಜನೆಗಳನ್ನು ಹಾಕಿಕೊಂಡು ಇವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.