



ಉಡುಪಿ ಆಗಸ್ಟ್ 27: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಬಾಲಕಿಯನ್ನು ರೈಲ್ವೆ ಆರ್ ಪಿ ಆಫ್ ಸುಧೀರ್ ಶೆಟ್ಟಿ, ಅವರು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ತನಿಕಾಧಿಕಾರಿ ಜಿನಾ ಪಿಂಟೋ ಸಹಕರಿಸಿದರು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಲ್ಪಟ್ಟ ಬಾಲಕಿಗೆ ನಿಟ್ಟೂರಿನ ಸಖಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲು ನೆರವಾದರು. ಪುನರ್ವಸತಿ ಪ್ರಕ್ರಿಯೆ ನಡೆಸುವಾಗ ಮಣಿಪಾಲ ಪೋಲಿಸ್ ಠಾಣೆಯ ವಿದ್ಯಾ ಇದ್ದರು.
ರಕ್ಷಿಸಲ್ಪಟ್ಟ ಬಾಲಕಿ ಅಪ್ರಾಪ್ತಳಂತೆ ಕಂಡು ಬಂದಿದ್ದು, ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಹೆಸರು ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆ ಅಥವಾ ನಿಟ್ಟೂರು ಸಖಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.