logo
Udupi Express  (1400px x 300px).jpg
SHARADA TECHERS.jpeg
hindalco everlast.jpeg

ಉಡುಪಿ: ಸೈಂಟ್ ಮೇರೀಸ್ ದ್ವೀಪ ಪ್ರಯಾಣ ಆರಂಭ..!

ಟ್ರೆಂಡಿಂಗ್
share whatsappshare facebookshare telegram
16 Sept 2024
post image

ಉಡುಪಿ: ರಾಜ್ಯದ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್ ಮೇರೀಸ್ ದ್ವೀಪಯಾನಕ್ಕೆ ಹೇರಲಾಗಿದ್ದ ಪ್ರವೇಶ ನಿರ್ಬಂಧ ತೆರವುಗೊಂಡಿದ್ದು, ಸೆಪ್ಟೆಂಬರ್ 15ರಿಂದ ಮತ್ತೆ ದ್ವೀಪಯಾನ ಆರಂಭಗೊಂಡಿದೆ.

ಮಳೆಗಾಲದಲ್ಲಿ 4 ತಿಂಗಳ ಕಾಲ ಸೈಂಟ್ ಮೇರೀಸ್ ದ್ವೀಪ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಅದರ ಅವಧಿ ಮುಗಿದಿದೆ. ಮಲ್ಪೆ ಬೀಚ್ ನಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ ಎಂದು ಪ್ರತಿವರ್ಷ ಮೇ 15ರಿಂದ ಸೆಪ್ಟೆಂಬರ್ 14ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.

ಮಲ್ಪೆ ಬೀಚ್ ಮತ್ತು ಮೀನುಗಾರಿಕೆ ಬಂದರಿನ ಪಶ್ಚಿಮ ಭಾಗದಲ್ಲಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್ ಗಳ ವ್ಯವಸ್ಥೆ ಇದೆ. ರಾಜ್ಯದ ಮೂಲೆಮೂಲೆಯ ಪ್ರವಾಸಿಗರು ಇಲ್ಲಿಗೆ ಮೋಜು ಮಸ್ತಿಗಾಗಿ ಆಗಮಿಸುತ್ತಾರೆ. ಸುಂದರ ಬೋಟಿಂಗ್ ವ್ಯವಸ್ಥೆ,ಬೀಚ್ ಮತ್ತು ಪ್ರಾಕೃತಿಕ ಸೌಂದರ್ಯ ಈ ಮೂರರ ಒಟ್ಟು ಮೊತ್ತವೇ ಈ ಸೈಂಟ್ ಮೇರೀಸ್ ದ್ವೀಪ. ಇದೀಗ ದ್ವೀಪಯಾನ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಇತ್ತ ಕಡೆ ಮುಖ ಮಾಡುತ್ತಿದ್ದಾರೆ.

WhatsApp Image 2024-08-15 at 9.09.03 AM.jpeg
WhatsApp Image 2024-08-15 at 9.03.12 AM.jpeg
WhatsApp Image 2024-08-15 at 8.30.19 AM.jpeg
33e25510-25e3-404f-a6e8-be120fdee729.jpg
WhatsApp Image 2024-08-15 at 7.59.13 AM.jpeg
WhatsApp Image 2024-08-15 at 8.02.53 AM.jpeg
WhatsApp Image 2024-08-15 at 9.13.39 AM.jpeg
WhatsApp Image 2024-04-29 at 2.40.38 PM.jpeg
sharada.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.