



ಉಡುಪಿ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ ನ್ಯಾಕ್ ನಾಲ್ಕನೇ ಆವೃತ್ತಿಯಲ್ಲಿ 3.14 ಸಿಜಿಪಿಎ ಪಡೆದು ಎ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ.ದಕ್ಷಿಣ ಭಾರತದಲ್ಲೇ ಅತ್ಯಧಿಕ ಅಂಕ ಪಡೆದ ಏಕೈಕ ಸಂಧ್ಯಾ ಕಾಲೇಜು ಇದಾಗಿದೆ. 57 ವರ್ಷಗಳ ಇತಿಹಾಸ ಇರುವ ಕರ್ನಾಟಕದ ಎರಡನೇ ಸಂಧ್ಯಾ ಕಾಲೇಜು ಈಗ ಕರ್ನಾಟಕದಲ್ಲೇ ಮುಂಚೂಣಿಯ ಸಂಧ್ಯಾ ಕಾಲೇಜು ಎಂಬ ಹಿರಿಮೆಯನ್ನ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪಡೆದಿದೆ. ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ, ಗೌರವಕಾರ್ಯದರ್ಶಿ ಸಿಎ. ಪ್ರಶಾಂತ ಹೊಳ್ಳ ಟಿ, ಗೌರವ ಕೋಶಾಧಿಕಾರಿ ಡಾ. ಜಿ.ಎಸ್. ಚಂದ್ರಶೇಖರ, ಆಡಳಿತ ಮಂಡಳಿಯ ಸದಸ್ಯರು,ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ,ಉಪ ಪ್ರಾಚಾರ್ಯರಾದ ಶ್ರೀ ವಿನಾಯಕ ಪೈ ಸಂತಸವನ್ನು ವ್ಯಕ್ತಪಡಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.