


ಗಾಜೀಪುರ: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಇಂತಹುದೇ ಘಟನೆ ಉತ್ತರ ಪ್ರದೇಶ ಗಾಜೀಪುರದಲ್ಲೂ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಾಜೀಪುರ ಸರ್ಕಾರಿ ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿನಿ ಮಂತಾಶಾ ಕಝ್ಮಿ ಎಂಬಾಕೆ ಹಾಸ್ಟೆಲ್‌ನಲ್ಲಿ ತನ್ನ ಸಹಪಾಠಿಗಳ ಖಾಸಗಿ ಫೋಟೋ, ವಿಡಿಯೋ ಸೆರೆಹಿಡಿದು ಅದನ್ನು ತನ್ನ ಸೀನಿಯರ್ ಅಮೀರ್ ಎಂಬಾತನಿಗೆ ಕಳುಹಿಸಿಕೊಡುತ್ತಿದ್ದಳು. ಅಮೀರ್ ಈ ಫೋಟೋ ಮತ್ತು ವಿಡಿಯೋ ಬಳಸಿ ಸಂತ್ರಸ್ತೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಈ ಬೆಳವಣಿಗೆ ಹಿಂದೆ ಕಝ್ಮಿ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ರೂಂಮೇಟ್‌ಗಳು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಕಝ್ಮಿ ಮೊಬೈಲ್ ತಪಾಸಣೆ ಮಾಡಿದ ವೇಳೆ ಆಕೆ ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಅದನ್ನು ಅಮೀರ್‌ಗೆ ರವಾನಿಸಿದ್ದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು 6 ತಿಂಗಳ ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಅದರ ಬೆನ್ನಲ್ಲೇ ಸಂತ್ರಸ್ತ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ಅಮೀರ್ ಮತ್ತು ಕಝ್ಮಿಯನ್ನು ಪೊಲೀಸರು ಬಂಧಿಸಿ, ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.