



ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉಡುಪಿಯ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಇಂದು ನಡೆಯಿತು. ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಅವರಿಗೆ ಹಸ್ತಾಂತರಿಸಿದರು ಸಮಾರಂಭದಲ್ಲಿ ಮನೋವೈದ್ಯ ಡಾ ಪಿ ವಿ ಭಂಡಾರಿ ಉದ್ಘಾಟಿಸಿ ಮಾತನಾಡುತ್ತಾ
ಕನ್ನಡ ವಿವಿಧತೆಯ ಭಾಷೆಯಾಗಿದೆ.ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ ಅವರ ಕೃತಿಗಳನ್ನು ಓದಿ ಅದರ ಸಾರವನ್ನು ನಾವು ಹಂಚಬೇಕು.ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕೂಡ ಕೈ ಜೋಡಿಸಬೇಕು ಎಂದರು.
ಮಣಿಪಾಲ್ ಯುನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೊಫೆಸರ್ ನೀತ ಇನಮ್ದಾರ್ ಮಾತನಾಡುತ್ತ ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿದರೆ ಮಾತ್ರ ಕನ್ನಡ ಮತ್ತಷ್ಟು ಬೆಳೆಯಲು ಸಾಧ್ಯ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸುವಲ್ಲಿ ನಾವು ಕೈ ಜೋಡಿಸಬೇಕು ಎಂದರು. ವೈವಿಧ್ಯತೆಯ , ಹೊಸ ವಿಚಾರ ದೊಂದಿಗೆ ಕ .ಸಾ.ಪ ಉಡುಪಿ ಘಟಕ ಬೆಳೆಯಲಿ ಎಂದರು.
ಪ್ರಾರಂಭದಲ್ಲಿ ಕನ್ನಡದ ಗೀತ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ನರೇಂದ್ರ ಕುಮಾರ್ ಕೋಟ ತಾಲೂಕು ಸಮಿತಿಯ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ರಂಜಿನಿ ವಸಂತ್ ಗೌರವ ಕೋಶಾಧ್ಯಕ್ಷರಾದ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು ಜಿಲ್ಲಾ ಸಮಿತಿಯ ಸದಸ್ಯ ಪೂರ್ಣಿಮ ಜನಾರ್ಧನ್ ನಿರೂಪಿಸಿದರು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಪ್ರಾಸ್ತಾವಿಕ ಮಾತನಾಡಿದರು ಜನಾರ್ದನ್ ಕೊಡವೂರು ಸ್ವಾಗತಿಸಿ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.