



ಉಡುಪಿ : ಕೋವಿಡ್ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ 251ನೇ ಪರ್ಯಾಯ ಮೆರವಣಿಗೆ ನಡೆಯಿತು..ಮಂಗಳವಾರ ಮುಂಜಾನೆ 3.30ಕ್ಕೆ ಆರಂಭಗೊಂಡ ಗಂಟೆಗೆ ಆರಂಭಗೊಂಡ ಮೆರವಣಿಗೆ ರಥಬೀದಿಗೆ ತಲುಪುವಾಗ 4.30 ಗಂಟೆಯಾಗಿತ್ತು. ಪ್ರತಿವರ್ಷ ಸುಮಾರು 6 ಗಂಟೆಗೆ ತಲುಪುತ್ತಿದ್ದ ಮೆರವಣಿಗೆ ಈ ಬಾರಿ ಕಲಾತಂಡಗಳ ಪ್ರದರ್ಶನವಿರದ ಹಿನ್ನೆಲೆಯಲ್ಲಿ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಸಾಗಿತು.

ಈ ಬಾರಿಯ ಪರ್ಯಾಯ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ತಟ್ಟಿರಾಯ ಸಾಗಿದರೆ, ಹಿಂದಿನಿಂದ ಬಿರುದಾವಳಿ, ವೇದಘೋಷ, ಇಸ್ಕಾನ್ ಭಜನಾ ತಂಡ, ಕುಂಭಾಶಿ ಡೋಲು, ಬ್ಯಾಂಡ್ ಸೆಟ್, ಕೊಂಬು ವಾದನ ತಂಡ, ಕೇರಳ ಚೆಂಡೆ, ಪಂಚ ವಾದ್ಯ ವಾದನ,ವಾದ್ಯ ಮೇಳ, ಶಂಖ ಜಾಗಟೆ, ದೊಂದಿ, ಇಬ್ಬರು ಬಾಲಕಿಯರ ಮರಗಾಲು ಕುಣಿತವಿತ್ತು. ಇದರ ಹಿಂದೆ ಮಠದ ವಾಲಗ, ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಮಠಾಧೀಶರುಗಳು ಅಲಂಕೃತ ವಾಹನ ಸಾಗಿದರು


ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮುಂಚೂಣಿಯಲ್ಲಿ ಸಾಗಿದರು. ಇವರ ಹಿಂದೆ , ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ ವಾದಿರಾಜ ಮಠ, ಪಲಿಮಾರು ಕಿರಿಯ ಪಟ್ಟ, ಶಿರೂರು ಮಠದ ಶ್ರೀಗಳಿದ್ದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.
ಸಾವಿರಾರು ಭಕ್ತರು ನಗರದುದ್ದಕ್ಕೂ ನಿಂತು ಮೆರವಣಿಗೆ ವೀಕ್ಷಿಸಿದರು. ಬೀದಿಯಲ್ಲಿ ಹಿಂದಿನಂತೆ ಒತ್ತಡದ ಜನಸಂಖ್ಯೆ ಇರಲಿಲ್ಲ. ಭಕ್ತರ ವಿರಳ ಓಡಾಟ ಕಂಡುಬಂತು.ಪರ್ಯಾಯ ಮೆರವಣಿಗೆಯಲ್ಲಿ ವಿವಿಧ ರಾಜಕೀಯ-ಸಾಮಾಜಿಕ ಮುಖಂಡರೂ ಭಾಗವಹಿಸಿ, ಜೋಡುಕಟ್ಟೆಯಿಂದ ರಥಬೀದಿವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ವಿವಿಧ ಸ್ವಯಂ ಸೇವಕರು ಕಾರ್ಯಕ್ರಮದ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.