logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ : ಯಕ್ಷಗಾನ ಹಾಗೂ ಕೃಷಿ ಕ್ಷೇತ್ರಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ ಎಂಬ ಆಕ್ರೋಶ ಕ್ಕೆ ಮಣಿದ ಜಿಲ್ಲಾಡಳಿತ. ಪರಿಷ್ಕೃತ ಪಟ್ಟಿ ಬಿಡುಗಡೆ. ಯಾರಿಗೆಲ್ಲ ಕೈಬಿಟ್ಟರು, ಯಾರಿಗೆ ಘೋಷಣೆ ಮಾಡಲಾಗಿದೆ ಇಲ್ಲಿ ನೋಡಿ ?

ಟ್ರೆಂಡಿಂಗ್
share whatsappshare facebookshare telegram
31 Oct 2021
post image

ಉಡುಪಿ: ಅ.30ರಂದು ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾದ 35 ಮಂದಿಯ ಪಟ್ಟಿಯಲ್ಲಿ ಯಕ್ಷಗಾನ ಹಾಗೂ ಕೃಷಿ ಕ್ಷೇತ್ರದಲ್ಲಿ ಯಾರೊಬ್ಬರನ್ನೂ ಪರಿಗಣಿಸಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರಿಂದ ಜಿಲ್ಲಾಡಳಿತ ತರಾತುರಿಯಲ್ಲಿ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಿದೆ.

ಈ ಹಿಂದಿನ ಪಟ್ಟಿಯಲ್ಲಿದ್ದ ಇಬ್ಬರನ್ನು ಕೈಬಿಟ್ಟು ಯಕ್ಷಗಾನ ಸಹಿತ ಎರಡು ಕ್ಷೇತ್ರಗಳಿಗೆ ಇಬ್ಬರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಒಟ್ಟು 35 ಮಂದಿಯ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ್ ಗಾಣಿಗ ಉಪ್ಪುಂದ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಮಣೂರು ಮಧುಸೂದನ್ ಬಾಯರಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಹಿಂದಿನ ಪಟ್ಟಿಯಲ್ಲಿದ್ದ ಯೋಗ ಕ್ಷೇತ್ರದ ಕೆ.ನರೇಂದ್ರ ಕಾಮತ್ ಪೆರ್ವಾಜೆ ಹಾಗೂ ಸಮಾಜ ಸೇವೆ ಕ್ಷೇತ್ರದ ನಾಗರಾಜ್ ಪುತ್ರನ್ ಕೋಟತಟ್ಟು ಅವರ ಹೆಸರನ್ನು ಕೈಬಿಡಲಾಗಿದೆ. ಮೊದಲ ಪಟ್ಟಿಯಲ್ಲಿದ್ದ ಮಹಾಬಲ ಸುವರ್ಣ ಹಾಗೂ ಪೂವಪ್ಪ ಪೂಜಾರಿ ಅವರಿಗೆ ದೈವರಾಧನೆ ಕ್ಷೇತ್ರವನ್ನು ಕೈಬಿಟ್ಟು ಸಂಕೀರ್ಣ ಕ್ಷೇತ್ರ ಎಂಬುದಾಗಿ ಬದಲಾಯಿಸಲಾಗಿದೆ. ಅದೇ ರೀತಿ ಕುಷ್ಟ ಕೊರಗ ಅವರಿಗೆ ಕಲೆಯ ಬದಲು ಕರಕುಶಲ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.