logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ 2024-27ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಪುನರಾಯ್ಕೆ

ಟ್ರೆಂಡಿಂಗ್
share whatsappshare facebookshare telegram
17 Jul 2024
post image

ಉಡುಪಿ: ಮೊಗವೀರ ಸಮಾಜದ ಸರ್ವೋಚ್ಚ ಸಂಸ್ಥೆಯಾದ ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ 2024-27ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಅವರು ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಗೌರವ ಸಲಹೆಗಾರ ನಾಡೋಜ ಡಾ। ಜಿ. ಶಂಕರ್ ಅವರ ಉಪಸ್ಥಿತಿಯಲ್ಲಿ ಜರಗಿದ ಸಭೆ ಯಲ್ಲಿ ಗುಂಡು ಬಿ. ಅಮೀನ್ ಅವರ ಹಂಗಾಮಿ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆನಡೆಯಿತು.

ನೂತನ ಪದಾಧಿಕಾರಿಗಳು:

ಅಧ್ಯಕ್ಷ-ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ- ಮೋಹನ್ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ- ಶರಣ್ ಕುಮಾರ್ ಮಟ್ಟು ಜತೆ ಕಾರ್ಯದರ್ಶಿ-ಸುಜಿತ್ ಸಾಲ್ಯಾನ್ ಮೂಲ್ಕಿ ಕೋಶಾಧಿಕಾರಿ-ರತ್ನಾಕರ್ ಸಾಲ್ಯಾನ್ ಮಲ್ಪೆ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ಗುಂಡು ಬಿ. ಅಮೀನ್ ಕಿದಿಯೂರು, ವಾಸುದೇವ ಸಾಲ್ಯಾನ್ ಕಟ ಪಾಡಿ, ಗಿರಿಧರ್ ಎಸ್. ಸುವರ್ಣ ಮೂಳೂರು, ಕೇಶವ ಎಂ. ಕೋಟ್ಯಾನ್ ಮಲ್ಪೆ ಸತೀಶ್ ಅಮೀನ್ ಬಾರ್ಕೂರು,

ಮಂಜುನಾಥ್ ಸುವರ್ಣ ಬಾರ್ಕೂರು, ರವೀಂದ್ರ ಶ್ರೀಯಾನ್ ಹಿರಿಯಡಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಯೂರು, ವಿನಯ ಕರ್ಕೇರ ಮಲ್ಪೆ ಗಿರೀಶ್ ಕುಮಾರ್ ಪಿತ್ತೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ. ಸುವರ್ಣ ಉಚ್ಚಿಲ, ನಾರಾಯಣ ಸಿ. ಕರ್ಕೇರ ಪಡುಬಿದ್ರಿ, ಸತೀಶ್ ಆರ್. ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ, ಹೇಮಂತ್ ತಿಂಗಳಾಯ ಹೊಯ್ದೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ. ಮೆಂಡನ್ ಬೋಳೂರು ಆಯ್ಕೆಯಾಗಿದ್ದಾರೆ.

ಸಾಮಾಜಿಕ ವಾಗಿ ತೊಡಗಿ ಕೊಂಡ ಜಯ ಸಿ ಕೋಟ್ಯಾನ್: ಸಾಮಾಜಿಕವಾಗಿ ತೊಡಗಿ ಕೊಂಡಿರುವ ಜಯ ಸಿ ಕೋಟ್ಯಾನ್ ಅವರು ಕರೋನ ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ವಾಗಿ ತೊಡಗಿಸಿಕೊಂಡು ಕರೋನವಾರಿಯರ್ ಆಗಿ ಗುರುತಿಸಿಕೊಂಡು ನೂರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ನೀಡಿದ್ದಾರೆ. ಮೊಗವೀರ ಮಹ ಜನ ಸಂಘದ ಜವಾಬ್ದಾರಿ ವಹಿಸಿದ ಬಳಿಕ ಸುಮಾರು ಮೂರು ಲಕ್ಷ ಕ್ಕೂ ಅಧಿಕ ಯುನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಿ ರೋಗಿಗಳ ಪಾಲಿಗೆ ಆಶಾಕಿರಣರಾಗಿದ್ದಾರೆ .

ಜಯ ಸಿ ಕೋಟ್ಯಾನ್  ಪ್ರಸ್ತುತ ಮಣಿಪಾಲ  ಕೆ ಎಂಸಿ  ಆಸ್ಪತ್ರೆ ಉದ್ಯೊಗಿ ಯಾಗಿದ್ದು , ಅವರ ಪತ್ನಿ ಜಯಂತಿ ಮಾಹೆ ಯ ಲೈಬ್ರರಿ ನ್ ಕಾರ್ಯನಿರ್ವಹಿಸುತಿದ್ದು . ಮಗ ಪ್ರೀತಂ ಕೆ‌ಎಂ ಸಿ ಯ ಡೆಂಟಲ್ ವಿಭಾಗದಲ್ಲಿ  ಎಂ ಡಿ ಎಸ್ ಶಿಕ್ಷಣ ಪಡೆಯುತಿದ್ದಾರೆ.

‌ಮೊಗವೀರ ಬಹ್ರೇನ್‌ ಆಯೋಜಿಸಿರುವ ಜು.19 ರಂದು ಕಿಂಗ್ಡಮ್ ಆಫ್ ಬಹ್ರೇನ್‌ ನ ಬಾನ್ ಸಯೀಗ್ ಥಾಯ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಲಿರುವ induction program ನಲ್ಲಿ ಮುಖ್ಯ ಅತಿಥಿ ಯಾಗಿ ಮೂರನೆ ಅವಧಿಗೆ ಅವಿರೋದವಾಗಿ ಅಧ್ಯಕ್ಷ ರಾಗಿ ಆಯ್ಕೆಯಾದ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ‌‌ ಕೋಟ್ಯಾನ್ ಹಾಗೂ ಬಾಡ ಎರ್ಮಾಳ್ ಮೀನುಗಾರರ ಪ್ರಾಥಮಿಕ ಸಹಕಾರಿ ಸೊಸೈಟಿಯ ಅಧ್ಯಕ್ಷ ದಿನೇಶ್ ಎರ್ಮಾಳ್ ಭಾಗವಹಿಸಲಿದ್ದಾರೆ ಎಂದು ಮೊಗವೀರ ಬಹ್ರೇನ್‌ ನ ಸಂಘದ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್ , ಉಪಾಧ್ಯಕ್ಷ ರಾದ ವಿನೋದ್ ಶ್ರಿಯಾನ್ , ಕಾರ್ಯದರ್ಶಿ ಯಾದ ಸುಮನ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.