



ಉಡುಪಿ, : ಉಡುಪಿ ಜಿಲ್ಲೆಯಲ್ಲಿ ಅತ್ಯುನ್ನತ ಸೇವೆಗೈದ/ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ನೀಡಲು ಸರಕಾರದ ಆದೇಶವಾಗಿದ್ದು, ಅದರಂತೆ 2020-21 ಮತ್ತು 2021-22 ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21 ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ರಜತಾದ್ರಿ ಮಣಿಪಾಲ, ಉಡುಪಿ ಇಲ್ಲಿ ಜರಗುವ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. 2020-21 ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ಆಯ್ಕೆಯಾದ ಅಧಿಕಾರಿ/ಸಿಬ್ಬಂದಿಗಳ ವಿವರ : ಪ್ರಶಾಂತ್ ಪಿ.ಕೆ.ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ, ಸಾಮಾಜಿಕ ಅರಣ್ಯ ವಿಭಾಗ, ಮಣಿಪಾಲ, ಉಡುಪಿ, ಬಿ. ವಿ. ಶ್ರೀನಿವಾಸ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕಾರ್ಕಳ, ಸಿದ್ದಪ್ಪ ಬಿ. ತುಡುಬಿನ್, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಅಜೆಕಾರು ಹೋಬಳಿ, ಕಾರ್ಕಳ ತಾಲೂಕು, ಅಂಜನಾದೇವಿ ಟಿ. ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಬಂದರು ಯೋಜನೆ ಗಂಗೊಳ್ಳಿ ಕುಂದಾಪುರ, ಆಶಾದೇವಿ ಕೇಶವ ನಾಯಕ, ನಿಲಯ ಮೇಲ್ವಿಚಾರಕರು, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಬ್ರಹ್ಮಾವರ, ಶಂಕರಪ್ಪ ಡಿ.ಎಲ್. ಅರಣ್ಯ ರಕ್ಷಕರು, ವಲಯ ಅರಣ್ಯ ಅಧಿಕಾರಿಯವರ ಕಛೇರಿ, ಬೈಂದೂರು ವಲಯ, ಯಶೋಧ ಎ., ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಹೆಚ್ ಉದಯ ಕುಮಾರ್ ಶೆಟ್ಟಿ, ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ. ಜಿಲ್ಲಾ ಸರ್ವೇಕ್ಷಣಾ ಘಟಕ, ಉಡುಪಿ, ಜೋಕಿಂ ಮೈಕಲ್ ಹೆಚ್ ಪಿಂಟೊ, ವಾಣಿಜ್ಯ ತೆರಿಗೆ ಅಧಿಕಾರಿ, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಕಾರ್ಕಳ, ಕೆ. ರಾಮಚಂದ್ರ ರಾವ್, ತಹಶೀಲ್ದಾರ್ ಗ್ರೇಡ್-2 (ಪ್ರಭಾರ) ಸಹಾಯಕ ಕಮೀಷನರ್ ಕಛೇರಿ ಕುಂದಾಪುರ. 2021-22 ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ಆಯ್ಕೆಯಾದ ಅಧಿಕಾರಿ/ಸಿಬ್ಬಂದಿಗಳ ವಿವರ ಡಾ. ಪ್ರೇಮಾನಂದ ಕೆ, ಅಂಕಿತ ಅಧಿಕಾರಿ, FSSAI ಉಡುಪಿ, ಡಾ.ನಾಗೇಶ, ವೈದ್ಯಕೀಯ ತಜ್ಞರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಡಾ. ಅರುಣ್ ಕುಮಾರ್ ಶೆಟ್ಟಿ ಎನ್, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಪಶುವೈದ್ಯಕೀಯ ಆಸ್ಪತ್ರೆ, ಬ್ರಹ್ಮಾವರ, ನಳಿನಿ ಜಿ ಐ, ಮುಖ್ಯ ಗ್ರಂಥಾಲಯಾಧಿಕಾರಿ, ನಗರ ಕೇಂದ್ರ ಗ್ರಂಥಾಲಯ ಉಡುಪಿ, ಪ್ರದೀಪ್ ಕುರುಡೇಕರ್ ಎಸ್, ತಹಶೀಲ್ದಾರರು ಕಾರ್ಕಳ, ಗಾಯತ್ರಿ ಯು. ವಿ, ಲೆಕ್ಕ ಅಧೀಕ್ಷಕರು, ನಗರಸಭೆ ಉಡುಪಿ, ಅಶೋಕ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, 80 ಬಡಗಬೆಟ್ಟು ಗ್ರಾಮ ಪಂಚಾಯತ್, ಉಡುಪಿ, ಪ್ರಶಾಂತ್ ಎನ್ ಎಸ್ , ಗ್ರಾಮಕರಣಿಕರು, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು, ಮೆಲ್ವಿನ್ ಜಯಕರ್ ಕರ್ಕಡ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಅನಿಲ್ ಎಸ್, ಗ್ರೂಪ್ ಡಿ, ಜಿಲ್ಲಾಧಿಕಾರಿಯವರ ಕಛೇರಿ ಉಡುಪಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.