



ಉಡುಪಿ : ಬೀಗ ಮುರಿದು ಲಕ್ಷಾಂತರಮೌಲ್ಯದ ಚಿನ್ನಾಭರಣ ಕಳ್ಳತನ
ಉಡುಪಿ : ಬಾಗಿಲಿನ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಗುಂಡಿಬೈಲು ದುಗ್ಗಣ್ಣಬೆಟ್ಟು ಮಾರ್ಗದ ಜುಮಾದಿಕಟ್ಟೆ ದೇವಸ್ಥಾನದ ಬಳಿ ಬಾಬು ಆಚಾರ್ಯ ಎಂಬವರ ಮನೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 7ರಿಂದ ಬುಧವಾರ ಬೆಳಿಗ್ಗೆ 5.30ರ ಮಧ್ಯೆ ಯಾರೋ ಕಳ್ಳರು ಬಾಬು ಆಚಾರ್ಯರ ಮನೆಯ ಬಾಗಿಲು ಮರಿದು ಒಳನುಗ್ಗಿದ್ದಾರೆ. ಬಳಿಕ ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ತೆಗೆದು ಅದರಲ್ಲಿದ್ದ 12 ಗ್ರಾಂ ತೂಕದ ಚಿನ್ನದ ತೆಂಡುಲ್ಕರ್‌ಚೈನ್, 3 ಗ್ರಾಂ ತೂಕದ ಚಿನ್ನದ ಪವಿತ್ರ ಉಂಗುರ-1, 24 ಗ್ರಾಂ ತೂಕದ ಕಾಶಿತಾಳಿ ಸರ-1, 22 ಗ್ರಾಂ ತೂಕದ ಪೆಂಡೆಂಟ್‌ಇರುವ ಮುತ್ತಿನ ಸರ-1, 26 ಗ್ರಾಂ ತೂಕದ ಚಿನ್ನದ ಬಳೆಗಳು-2, 3 ಗ್ರಾಂ ತೂಕದ ಚಿನ್ನದ ಉಂಗುರ-1 ಸಹಿತ ಒಟ್ಟು 90 ಗ್ರಾಂ ತೂಕದ ₹ 3,60,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಅಲ್ಲದೆ, ಬೆಳ್ಳಿ ಹರಿವಾಣ-1, ಬೆಳ್ಳಿ ತೋಟ-1, ಬೆಳ್ಳಿ ಕವಳಿಕೆ ಸೌಟು-1 ಒಟ್ಟು ರೂ. 10,000 ಮೌಲ್ಯದ ಬೆಳ್ಳಿ ಸಾಮಾಗ್ರಿಗಳು ಜೊತೆಗೆ ದೇವರ ಡಬ್ಬದಲ್ಲಿದ್ದ ಅಂದಾಜು ರೂ. 400/- ಮತ್ತು ಪಿರ್ಯಾದುದಾರರ ಅಣ್ಣನ ಜಾಗದ ಮೂಲ ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಒಟ್ಟು ಮೌಲ್ಯ 3,70,400 ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.