



ಉಡುಪಿ ಹೊರವಲಯದ 76-ಬಡಗುಬೆಟ್ಟು ಗ್ರಾಮದ ಬೈಲೂರು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು, ಮೂರು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಅಕ್ಟೋಬರ್ 29ರ ರಾತ್ರಿ 8ಗಂಟೆಯಿಂದ ಅಕ್ಟೋಬರ್ 30ರ ಬೆಳಿಗ್ಗೆ 7ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ದೈವಸ್ಥಾನದ ಬಾಗಿಲು ಮುರಿದು, ಎರಡು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿದ್ದರು. ಅದಾದ ಬಳಿಕ ನವೆಂಬರ್ 11ರ ರಾತ್ರಿ 8.30ರಿಂದ ನ.12ರ ಬೆಳಿಗ್ಗೆ 7ಗಂಟೆಯ ಮಧ್ಯಾವಧಿಯಲ್ಲಿ ಒಂದು ಸಣ್ಣ ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ 3 ಡಬ್ಬಿಗಳಲ್ಲಿ ಒಟ್ಟು 900 ರೂ. ನಗದು ಇರಬಹುದು ಎಂದು ದೈವಸ್ಥಾನದ ಅರ್ಚಕ ಅಭಿಲಾಶ್ ಕುಂದರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.