logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ತಿರಂಗಾ ಯಾತ್ರೆ

ಟ್ರೆಂಡಿಂಗ್
share whatsappshare facebookshare telegram
8 Aug 2022
post image

ಕಾರ್ಕಳ : ಹಿಂದೆ ಇಡೀ ದೇಶ ಸ್ವಾತಂತ್ರ್ಯದ ೭೫ ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಭಾರತಕ್ಕೆ ಕೇವಲ ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಸಾಕಷ್ಟು ಜನ ಕ್ರಾಂತಿಕಾರಿಗಳು ದೇಶದ ಸ್ವಾತಂತ್ರ್ಯ ಕ್ಕೆ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಅಂತಹಃ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ಇವತ್ತು ಈ ದೇಶ ಬ್ರೀಟೀಷರಿಂದ ಮುಕ್ತವಾಗಿ ೭೫ ವರ್ಷಗಳೇ ಕಳೆದಿವೆ. ಯುವ ಜನಾಂಗಕ್ಕೆ ಈ ನೆಲದ ದೇಶದ ನೈಜ ಇತಿಹಾಸವನ್ನು ತಿಳಿಸುವ ಕೆಲಸ ಆಗಬೇಕು. ಮಾನ್ಯ ಪ್ರಧಾನ ಮಂತ್ರಿಯವರು ದೇಶದ ಪ್ರತಿ ಮನೆಯ ಮೇಲೆ ಗೌರವದ ಪ್ರತೀಕವಾಗಿ ರಾಷ್ಟçಧ್ವಜವನ್ನು ಹಾರಿಸಿ ೭೫ ನೇ ಸ್ವಾತಂತ್ರ್ಯದ ಆಚರಣೆ ಮಾಡಬೇಕು ಎನ್ನುವ ಮನವಿಯನ್ನು ದೇಶವಾಸಿಗಳಿಗೆ ಮಾಡಿದ್ದಾರೆ. ಆಕಾಶ,ಭೂಮಿ,ಸಾಗರ ಸೇರಿ ಬೇರೆ ಗೃಹಗಳಲ್ಲೂ ರಾಷ್ಟçಧ್ವಜ ಹಾರಿಸುವುದರ ಮುಖೇನ ಈ ಸ್ವಾತಂತ್ರö್ಯದ ಆಚರಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಮಾನ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ರವರ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಕಾರ್ಯಕ್ರಮದ ಮುಖಾಂತರ ರಾಜ್ಯದಿಂದ ಈ ದೇಶದ ಸ್ವಾತಂತ್ರ್ಯ ಕ್ಕೆ ಹೋರಾಡಿದ ಪ್ರಾಣ ತೆತ್ತ ೭೫ ಜನ ಹಾಗೂ ಪ್ರದೇಶಗಳನ್ನು ಗುರುತಿಸಿ ಇತಿಹಾಸದ ನೆನಪು ಮಾಡಿ ಆ ನೆಲದ ಸಂಸ್ಕೃತಿಯನ್ನು ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸುವ ಕಾರ್ಯ ನಡಿತಾ ಇದೆ. ಈ ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸುವ ಅವಕಾಶ ನಮಗೆ ಸಿಕ್ಕಿಲ್ಲ ಆದರೆ ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬ್ರಿಟೀಷರೊಂದಿಗೆ ಹೋರಾಟ ಮಾಡಿದವರನ್ನು ನೆನಪಿಸುವ ಮುಖಾಂತರ ಅದೆಷ್ಟೋ ವರ್ಷಗಳ ಗುಲಾಮಗಿರಿಯಿಂದ ಮುಕ್ತಿ ನೀಡಲು ಹೋರಾಡಿದ ಎಲ್ಲಾ ಮಹಾನ್ ಸೇನಾನಿಗಳು ಕೆಲಸಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸುವುದು ಮಾತ್ರವಲ್ಲದೆ ಸಂಭ್ರಮದಿಂದ ಹೆಮ್ಮೆಯಿಂದ ವಿನೂತನ ರೀತಿಯಲ್ಲಿ ೭೫ ಮೀಟರ್ ಉದ್ದದ ಬೃಹತ್ ದ್ವಜದೊಂದಿಗೆ ಸಾವಿರಾರು ಯವ ಪಡೆಯನ್ನು ಸೇರಿಸಿ ಬೃಹತ್ ತಿರಂಗಾ ಯಾತ್ರೆಯನ್ನು ಆಗಸ್ಟ್ ೧೩ ನೇ ಶನಿವಾರ ಮಧ್ಯಾಹ್ನ ೩ ಗಂಟೆಗೆ ಕಾರ್ಕಳದ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ರಾಷ್ಟಕ್ಕೆ ಗೌರವವನ್ನು ಸಲ್ಲಿಸುವ ಈ ಸುವರ್ಣ ಅವಕಾಶವನ್ನು ತಾಲೂಕಿನ ವಿದ್ಯಾರ್ಥಿ ಮಿತ್ರರು,ಯುವಕರು,ಮಹಿಳೆಯರು,ಸಾರ್ವಜನಿಕರು ಭಾಗವಹಿಸುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಿಖ್ಯಾತ್ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಸುಹಾಸ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಭರತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರಾಷ್ಟçಧ್ವಜ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.