



ಉಡುಪಿ: ನೋಡ ನೋಡುತ್ತಲೇ ಕಡಲಬ್ಬರದ ನಡುವೆ ಯುವಕನೋರ್ವ ಕೊಚ್ಚಿ ಹೋದ ಘಟನೆ ಉಡುಪಿಯ ಹೂಡೆ ಬಳಿಯ ಕಡಲ ತೀರದಲ್ಲಿ ಇಂದು ನಡೆದಿದೆ. ಸಮುದ್ರದ ಮಧ್ಯೆದಲ್ಲಿ ಮುಳುಗಿ ಏಳುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸ್ನೇಹಿತರ ಜೊತೆ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಈತ, ಮೋಜು ಮಸ್ತಿಗಾಗಿ ಹೂಡೆಯ ಕಡಲ ಕಿನಾರೆಗೆ ತೆರಳಿದ್ದರು.
ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದಾಗ ಕಡಲಿನ ಅಬ್ಬರದ ಅಲೆಗಳ ಹೊಡೆತಕ್ಕೆ ಯುವಕ ತೇಲಿ ಹೋಗಿದ್ದಾನೆ. ಸಮುದ್ರದಲ್ಲಿ ಮುಳುಗಿ ಏಳುತ್ತಿದ್ದನ್ನು ಕಂಡ ಸ್ಥಳೀಯರು ಆತನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ಅವರು ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಇಳಿದು ಅಲೆಗಳೊಡನೆ ಸೆಣಸಿ ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ. ಪ್ರವಾಸಿಗನನ್ನು ರಕ್ಷಣೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.