logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಸೇಲ್ಸ್‌ ಮೆನ್‌ ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಳೆಗಳನ್ನು ಎಗರಿಸಿದ ಮಹಿಳೆಯರು

ಟ್ರೆಂಡಿಂಗ್
share whatsappshare facebookshare telegram
25 Nov 2021
post image

ಉಡುಪಿ: ಸೇಲ್ಸ್‌ ಮೆನ್‌ ನ ಗಮನ ಬೇರೆಡೆಗೆ ಸೆಳೆದು ಇಬ್ಬರು ಮಹಿಳೆಯರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಬಳೆಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಸುಲ್ತಾನ್‌ ಡೈಮಂಡ್‌ & ಗೋಲ್ಡ್‌ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನಡೆದಿದೆ. ನ.23ರಂದು ಸಂಜೆ 6.15ರ ಸುಮಾರಿಗೆ ಉಡುಪಿ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸುಲ್ತಾನ್‌ ಡೈಮಂಡ್‌ & ಗೋಲ್ಡ್‌ ಆಭರಣ ಮಳಿಗೆಗೆ ಆಭರಣ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಬ್ಬರು ಬಂದಿದ್ದು, ಅವರಿಗೆ ಮಳಿಗೆಯ ಮೊಹಮ್ಮದ್‌ ಮುಬಾರಕ್‌ ಚಿನ್ನದ ಬಳೆಗಳನ್ನು ತೋರಿಸಿದ್ದಾರೆ. ಆದರೆ ಆರೋಪಿ ಮಹಿಳೆಯರಿಬ್ಬರು ಮುಬಾರಕ್ ಅವರ ಗಮನವನ್ನು ಬೇರೆಡೆಗೆ ಸೆಳೆದು ಒಟ್ಟು 60 ಗ್ರಾಂ ತೂಕದ ₹3 ಲಕ್ಷ ಮೌಲ್ಯದ 4 ಚಿನ್ನದ ಬಳೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಜ್ಯುವೆಲ್ಲರ್ಸ್ ಮಳಿಗೆಯ ಮ್ಯಾನೇಜರ್ ಮೊಹಮ್ಮದ್‌ ಅಜ್ಮಲ್‌ ನೀಡಿರುವ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.