



ಕೀವ್ : ರಷ್ಯಾ ಹಾಗೂ ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬೆಲರೂಸ್ ದೇಶದ ಗಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆಗೆ ತಯಾರಾಗಿದೆ ಅಂತರಾಷ್ಟ್ರೀಯ ಸುದ್ದಿವಾಹಿನಿ ಎಎಫ್ಪಿ ವರದಿಮಾಡಿದೆ
ಬೆಲರೂಸ್ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಕೊಂಡಿರುವುದಾಗಿ ಹೇಳಿದ್ದು ರಷ್ಯಾದೊಂದಿಗೆ ಮಾತುಕತೆಗೆ ಉಕ್ರೇನ್ ಸಿದ್ಧವಾಗಿದೆ. ಆದರೆ, ನೆರೆಯ ಬೆಲರೂಸ್‌ನಲ್ಲಿ ಅಲ್ಲ. ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಬೆಲರೂಸ್ ಅನ್ನು ರಷ್ಯಾ ಬಳಸಿಕೊಂಡಿದೆ. ಹೀಗಾಗಿ ಬೆಲೂರಸ್‌ನಲ್ಲಿ ಮಾತುಕತೆ ಬೇಡ' ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ತಿಳಿಸಿದ್ದರು.
ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಾಕು ಸೇರಿದಂತೆ ಇತರ ದೇಶಗಳಲ್ಲಿ ಮಾತುಕತೆ ನಡೆಸಲು ಉಕ್ರೇನ್ ಪ್ರಸ್ತಾಪಿಸಿತ್ತು. ಮಹತ್ವದ ಬೆಳವಣಿಗೆ ಯೊಂದರಲ್ಲಿ ಈ ಪ್ರಸ್ತಾಪ ನಡೆದಿದೆ ಎನ್ನಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.