



ಸುಳ್ಯ:+ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ(Sullia).
ಆ.13 ರಂದು ಸ್ಥಳೀಯರು ಮೀನು ಹಿಡಿಯಲು ನದಿ ತೀರಕ್ಕೆ ಹೋಗಿದ್ದಾಗ ನದಿಯಲ್ಲಿ ಮೃತದೇಹ ಕಂಡು ಬಂದಿದೆ.ಸ್ಥಳೀಯರು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ಅವರಿಗೆ ವಿಷಯ ತಿಳಿಸಿದ್ದಾರೆ.
ಸದಸ್ಯ ಸುದೇಶ್ ಅರಂಬೂರು ಅವರು ಸುಳ್ಯ ಠಾಣಾ ಪೊಲೀಸರಿಗೆ ವಿಷಯ ತಿಳಿಸಿದರು.
ಸ್ಥಳಕ್ಕೆ ಸುಳ್ಯ ಪೋಲಿಸರ ಆಗಮಿಸಿದ ಬಳಿಕ ಪೈಚಾರಿನ ಮುಳುಗು ತಜ್ಞರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಯಿತು.
ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ ಆಧಾರ್ ಕಾರ್ಡ್ ಬದಲಾವಣೆಗೆಂದು ಅರಂತೋಡಿಗೆ ಹೋಗಿದ್ದ ಚೆಂಬು ಗ್ರಾಮದ ಮಿನುಂಗೂರಿನ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಮೃತ ದೇಹವಾಗಿರಬಹುದೆಂದು ಸಂಶಯಿಸಲಾಗಿದೆ.
ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿರುವುದಾಗಿ ತಿಳಿದು ಬಂದಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.