



ಮುಂಬೈ: ಬ್ಯಾಂಕ್ ಸಾಲದ ಖಾತೆಗಳಲ್ಲಿ ಇರುವ ಹಣವನ್ನು ಕೂಡ ಯುಪಿಐ ವಹಿವಾಟಿಗೆ ಬಳಸಿಕೊಳ್ಳಬಹುದು ಎಂದು RBI ತಿಳಿಸಿದ. ಜಮಾ ಮೊತ್ತವನ್ನು ಮಾತ್ರ ಯುಪಿಐ ವ್ಯವಸ್ಥೆ ಮೂಲಕ ಪಾವತಿಗೆ ಬಳಸಿಕೊಳ್ಳಲು ಇದುವರೆಗೆ ಅವಕಾಶ ಇತ್ತು.
ಸಾಲದ ಖಾತೆಗೆ ಹಣ ಹಾಕುವುದಕ್ಕೆ ಹಾಗೂ ಸಾಲದ ಖಾತೆಯಿಂದ ಹಣ ಪಾವತಿ ಮಾಡುವುದಕ್ಕೆ ಕೂಡ ಯುಪಿಐ ಬಳಕೆ ಮಾಡುವ ಬಗ್ಗೆ RBI ಏಪ್ರಿಲ್ ನಲ್ಲಿ ಪ್ರಸ್ತಾಪಿಸಿತ್ತು.
ಈಗಿರುವ ವ್ಯವಸ್ಥೆಯು ಉಳಿತಾಯ ಖಾತೆಗಳು, ಒ.ಡಿ. ಖಾತೆಗಳು, ಪ್ರಿಪೇಯ್ಡ್ ವಾಲೆಟ್ ಗಳು ಹಾಗೂ ರುಪೇ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐ ಜೊತೆ ಜೋಡಿಸಲು ಅವಕಾಶ ಕಲ್ಪಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.