



ಉಪ್ಪಿನಂಗಡಿ: ನಿನ್ನಿಕ್ಕಲ್ ನಿವಾಸಿ, ಮಾಧವ ಶಿಶು ಮಂದಿರದ ಮಾತೃ ಮಂಡಳಿಯ ಸದಸ್ಯೆ ರಾಧಾ ನಿನ್ನಿಕ್ಕಲ್ (66) ಅವರು ಕೆಲವು ದಿನಗಳ ಹಿಂದೆ ಮಾಣಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದವರು ಬುಧವಾರ ಮೃತಪಟ್ಟರು.
ಬಸ್ಸಿನಲ್ಲಿ ಮಗುವನ್ನು ಎತ್ತಿಕೊಂಡು ಬಂದ ಮಹಿಳೆಗೆ ತನ್ನ ಸೀಟು ಬಿಟ್ಟುಕೊಟ್ಟು ತಾನು ನಿಂತಿದ್ದ ವೇಳೆ ಆಯತಪ್ಪಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಫಲಿಸದ ಕಾರಣ ಬುಧವಾರ ಮನೆಗೆ ಕರೆತರಲಾಗಿತ್ತು. ಮನೆ ತಲುಪುತ್ತಿದ್ದಂತೆಯೇ ಅವರು ಸಾವನ್ನಪ್ಪಿದ್ದಾರೆ. ಅವರು ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಪತಿ ಕೆಲವು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಇವರು ವನಿತಾ ಭಜನ ಮಂಡಳಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.