



ಉಪ್ಪಿನಂಗಡಿ: ವಿದ್ಯುತ್ ಆಘಾತಕ್ಕೊಳಗಾಗಿ ವ್ಯಕ್ತಿ ಯೋರ್ವರು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ವಳಕಡಮದ ಕೆರಂತೇಳು ಎನ್ನುವಲ್ಲಿ ಅ. 4ರಂದು ನಡೆದಿದೆ. ಇಲ್ಲಿನ ನಿವಾಸಿ ಬಾಬು (52) ಮೃತಪಟ್ಟವರು. ಮನೆಯಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಕೈ ಹಾಕಿದಾಗ ಅದರಲ್ಲಿ ವಿದ್ಯುತ್ ಪ್ರವಹಿಸಿ ಅವರು ವಿದ್ಯುತ್ ಆಘಾತಕ್ಕೊಳಗಾದರು.
ತತ್‌ಕ್ಷಣವೇ ಅವರ ಸಂಬಂಧಿಕರು ಅವರನ್ನು ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದು, ಇಲ್ಲಿನ ಸಿಬಂದಿ ಚರಣ್ ಹಾಗೂ ಮುರಳೀಧರ ಆರ್ತಿಲ ಅವರು ಆ್ಯಂಬುಲೆನ್ಸ್‌ನಲ್ಲಿ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.