logo
WhatsApp Image 2026-04-02 at 14.46.04.jpeg
hindalco everlast.jpeg

ಉಪ್ಪುಂದ : ದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹ ಪತ್ತೆ

ಟ್ರೆಂಡಿಂಗ್
share whatsappshare facebookshare telegram
18 Sept 2021
post image

ಬೈಂದೂರು ಸೆ.೧೮ : ದೋಣಿ ಮಗುಚಿ ನಾಪತ್ತೆಯಾಗಿದ್ದ ಮೀನುಗಾರ ಕಚಕನ ಮನೆಯ ವಾಸು ಖಾರ್ವಿ ಅವರ ಪುತ್ರ ಚರಣ್ ಖಾರ್ವಿ (೨೫) ಅವರ ಮೃತದೇಹ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಸುಮಾರಿಗೆ ತಾರಾಪತಿ ಅಮ್ಮನವರ ತೊಪ್ಪಲು ಪ್ರದೇಶದಲ್ಲಿ ಹಾಗೂ ಸಂಜೆ ೪.೩೦ ಗಂಟೆಯ ಸುಮಾರಿಗೆ ಮಡಿಕಲ್ ಕರ್ಕಿಕಳಿಯ ಪ್ರದೇಶದಲ್ಲಿ ಉಪ್ಪುಂದ ನದಿಕಂಠದ ನಿವಾಸಿ ಅಣ್ಣಪ್ಪ ಮೊಗವೀರ (೪೫) ಇಬ್ಬರ ಮೃತದೇಹ ಪತ್ತೆಯಾಗಿದೆ.

ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಾಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡಾದೋಣಿ ಸೆ. ೧೭ರ ಸಂಜೆ ಮಗುಚಿ ಬಿದ್ದು ದುರಂತ ಸಂಭವಿಸಿತ್ತು. ನಾಪತ್ತೆಯಾದ ಇಬ್ಬರು ಮೀನುಗಾರರಲ್ಲಿ ಚರಣ್ ಖಾರ್ವಿ ಮತ್ತು ಅಣ್ಣಪ್ಪ ಮೊಗವೀರ ಎಂದು ಗುರುತಿಸಲಾಗಿದೆ.

ದೋಣಿಯಲ್ಲಿದ್ದ ಇತರೆ ನಾಲ್ಕೈದು ಮೀನುಗಾರರು ಬೇರೆ ನಾಡದೋಣಿ ಸಹಾಯದಿಂದ ದಡ ಸೇರಿದ್ದಾರೆ. ದುರಂತ ಸಂಭವಿಸಿದಾಗ ಅವರು ಜೈ ಗುರೂಜಿ ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು.

ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಮೀನುಗಾರಿಕೆ ಮುಗಿಸಿ ಬರುತಿದ್ದ ದೋಣಿಗೆ ತೆರೆ ಬಡಿದ ಪರಿಣಾಮ ಇಬ್ಬರು ಮೀನುಗಾರರು ಮೃತರಾಗಿದ್ದಾರೆ. ಒಬ್ಬ ಎಳೆಯ ವಯಸ್ಕ, ಮತ್ತೊಬ್ಬ ಮಧ್ಯ ವಯಸ್ಕ, ಆ ಇಬ್ಬರು ಮನೆಯವರ ಮುಖ ನೋಡುವಾಗ ಅಪಾರ ನೋವು ಉಂಟಾಯಿತು.

ಮೀನುಗಾರರ ಸಮಸ್ಯೆಯ ಕುರಿತಂತೆ ಮೊನ್ನೆಯಷ್ಟೆ ಮೀನುಗಾರಿಕೆಯ ಸಚಿವರ ನೇತೃತ್ವದಲ್ಲಿ ಚರ್ಚಿಸಲಾಗಿದೆ. ವಿವಿಧ ಕಾಮಗಾರಿಗಳು, ಅಭಿವೃದ್ಧಿ, ಮೀನುಗಾರರ ಸಮಸ್ಯೆಯ ಕುರಿತಂತೆ ಶೀಘ್ರದಲ್ಲೇ ಕರಾವಳಿಯ ಶಾಸಕರೊಂದಿಗೆ ಮತ್ತು ಸಚಿವರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಿದ್ದೇವೆ. ಮೀನುಗಾರಿಕೆ ನಿದೇರ್ಶಕರೊಂದಿಗೆ ಮಾನತನಾಡಿದ್ದೇನೆ. ಬೈಂದೂರು ಕ್ಷೇತ್ರಕ್ಕೆ ಮೂರು ಸಾವಿರ ಜೀವ ರಕ್ಷಕ ಜಾಕೇಟ್‌ಗಳನ್ನು ಒದಗಿಸುವಂತೆ ಕೋರಲಾಗಿದೆ. ಮೃತರ ಕುಟುಂಬಕ್ಕೆ ಆರು ಲಕ್ಷ ರೂಪಾಯಿಗಳು ಆದಷ್ಟು ದೊರಕಲಿದೆ. ಹಾಗೇ ನಮ್ಮ ಶಾಸಕರ ನಿಧಿಯಲ್ಲಿ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯ್ಕ್, ಗಂಗೊಳ್ಳಿ ಕರಾವಳಿ ಪೊಲೀಸ್ ಕಾವಲು ಪಡೆಯ ಎಸೈ ವಿಜಯ ಅಮೀನ್ ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಮೃತದೇಹ ಶೋಧಕಾರ್ಯದಲ್ಲಿ ಭಾಗವಹಿಸಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.