logo
WhatsApp Image 2026-04-02 at 14.46.04.jpeg
hindalco everlast.jpeg

ಟ್ರಾಫಿಕ್ ನಿಯಂತ್ರಣಕ್ಕೆ ರಾಜಧಾನಿಯ 20 ಜಂಕ್ಷನ್‌ಗಳಲ್ಲಿ ಡ್ರೋನ್ ಬಳಕೆ

ಟ್ರೆಂಡಿಂಗ್
share whatsappshare facebookshare telegram
20 Jun 2023
post image

ಬೆಂಗಳೂರು: ನಗರದ 20 ಜಂಕ್ಷನ್‌ಗಳಲ್ಲಿ ನಿತ್ಯವೂ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ಮುಂದಾಗಿರುವ ಪೊಲೀಸರು, ಜಂಕ್ಷನ್‌ಗಳಲ್ಲಿ ಸೋಮವಾರ ಡ್ರೋನ್ ಹಾರಿಸಿ ಪರಿಸ್ಥಿತಿ ಅವಲೋಕನ ನಡೆಸಿದರು.

‘ನಗರದ ಸಂಚಾರ ದಟ್ಟಣೆಯಿಂದ ಜನ ಬೇಸತ್ತಿದ್ದಾರೆ. ದಟ್ಟಣೆ ನಿಯಂತ್ರಿಸಲು ತ್ವರಿತ ಕ್ರಮ ಕೈಗೊಳ್ಳಿ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಇತ್ತೀಚೆಗಷ್ಟೇ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ 20 ಜಂಕ್ಷನ್‌ಗಳ ಪಟ್ಟಿ ಮಾಡಿರುವ ಸಂಚಾರ ಪೊಲೀಸರು, ಅಲ್ಲಿಯ ದಟ್ಟಣೆಗೆ ಪರಿಹಾರ ಕಂಡು ಹಿಡಿಯುತ್ತಿದ್ದಾರೆ.

ಸುರಕ್ಷಿತ ನಗರ ಯೋಜನೆಯಡಿ ಎಂಟು ಡ್ರೋನ್ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಅದರಲ್ಲಿ ನಾಲ್ಕು ಕ್ಯಾಮೆರಾಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ. ಅದೇ ಡ್ರೋನ್ ಗಳನ್ನು ಸಂಚಾರ ಪೊಲೀಸರು ಸೋಮವಾರ ಪ್ರಾಯೋಗಿಕವಾಗಿ ಬಳಕೆ ಮಾಡಿದರು. ಯಾವ ರಸ್ತೆಯಲ್ಲಿ ಎಷ್ಟು ದಟ್ಟಣೆ ಇದೆ ? ಅದಕ್ಕೆ ಕಾರಣವೇನು ? ಎಂಬುದನ್ನು ದೃಶ್ಯಗಳ ಸಮೇತ ಸೆರೆ ಹಿಡಿದರು.

‘ಡೋನ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಸರ್ವ‌್ರಗೆ ರವಾನೆಯಾಗಲಿದೆ. ಡ್ರೋನ್ ಬಳಕೆ ಬಗ್ಗೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.