



ಕಾರ್ಕಳ : ಕಾರ್ಕಳ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಾಣೂರು ಬೈಪಾಸ್‌ನಿಂದ ಮಂಗಳೂರು ರಸ್ತೆ ಹಾಗೂ ಕಾರ್ಕಳ ಬೈಪಾಸ್‌ನಿಂದ ಮಾಳ ಚೆಕ್‌ಪೋಸ್ಟ್ ತನಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪವಿಭಾಗದ ಅಧಿಕಾರಿಗಳೊಂದಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರಿನ ಅಧಿಕಾರಿಗಳೊಂದಿಗೆ ಮಾಜಿ ಸಚಿವರು ಹಾಗೂ ಕಾರ್ಕಳದ ಶಾಸಕರೂ ಆದ ಶ್ರೀ ವಿ ಸುನಿಲ್ ಕುಮಾರ್‌ರವರು ಇಂದು ವಿಕಾಸ ಜನಸೇವಾ ಕಛೇರಿಯಲ್ಲಿ ಸಭೆ ನಡೆಸಿದರು. ಸಾಣೂರು-ಮಂಗಳೂರು ರಸ್ತೆಯ ಬೈಪಾಸ್‌ನಿಂದ ಕಾಂತಾವರ-ಚಿಲಿಂಬಿ ವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲದಲ್ಲಿ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತಕ್ಷಣ ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಿದ್ದು, ಹಾಗೂ ಭೂಮಿ ಕಳೆದುಕೊಂಡ ಸಂತೃಸ್ತರಿಗೆ ಭೂಸ್ವಾಧೀನ ಪರಿಹಾರ ಮಾಹಿತಿಯನ್ನು ಅತೀ ಶೀಘ್ರ ನಡೆಸುವಂತೆ ಸೂಚಿಸಿದರು. ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಕ್ಷಣ ಕ್ರಮವಹಿಸುವಂತೆಯೂ ಹಾಗೂ ಕಾಮಗಾರಿ ನಡೆಯುವ ರಸ್ತೆಯ ಅಲ್ಲಲ್ಲಿ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಲು ಸೂಚಿಸಿದರು. ಬೈಪಾಸ್-ಮಿಯ್ಯಾರು-ಮಾಳ ರಸ್ತೆಯ ಬದಿಗಳಲ್ಲಿ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಕಾಮಗಾರಿಯ ಪ್ರಗತಿಯು ಕುಂಟಿತವಾಗುತ್ತಿದೆ. ಈ ನಿಟ್ಟಿನಲ್ಲಿ ತೆರವುಗೊಳಿಸಲು ಬಾಕಿಯಿರುವ ಮರಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಸೂಚಿಸುತ್ತಾ, ರಾಷ್ಟ್ರೀಯ ಹೆದ್ದಾರಿ 169-Aಯ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ ರಸ್ತೆಯು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಿವಪುರದಿಂದ ಆಗುಂಬೆವರೆಗೆ ಸಂಪರ್ಕ ಹೊಂದಿದ್ದು, ಶಿವಪುರದಿಂದ ಹೆಬ್ರಿಯವರೆಗೆ ಅಪಾಯಕಾರಿ ಮರಗಳು ಸಂಚಾರಕ್ಕೆ ಆತಂಕವುಂಟುಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವಿಲೇವಾರಿಗೆ ಕ್ರಮವಹಿಸುವಂತೆ ಸೂಚಿಸಿದರು. ಹಾಗೆಯೇ ಮಾಳ ಸಂಪರ್ಕ ರಸ್ತೆಯಲ್ಲಿ ಭೂ ಸಂತ್ರಸ್ತರಿಗೆ ಬಾಕಿಯಿರುವ ಭೂ ಪರಿಹಾರ ತಕ್ಷಣ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಏನಾದರೂ ತೊಂದರೆಗಳಿದ್ದಲ್ಲಿ ನನ್ನ ಗಮನಕ್ಕೆ ತರುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂ ಸ್ವಾಧೀನ ಅಧಿಕಾರಿಗಳಾದ ಮಹಮ್ಮದ್ ಇಸಾಕ್, ಕಾರ್ಕಳ ತಹಶೀಲ್ದಾರರಾದ ಅನಂತ್‌ಶಂಕರ್, ಕಾರ್ಕಳದ ಕಾರ್ಯನಿರ್ವಹಣಾಧಿಕಾರಗಳಾದ ಗುರುದತ್, ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಭೂ ಸಂತೃಸ್ತರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.