logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು-ಮುಂಬೈ ನಡುವೆ ʼವಂದೇ ಭಾರತ್‌ ಎಕ್ಸ್‌ಪ್ರೆಸ್‌ʼ ಹೊಸ ರೈಲು ಆರಂಭಿಸುವಂತೆ ಕೇಂದ್ರ ರೈಲ್ವೇ ಸಚಿವರಿಗೆ ವಿ.ಸುನಿಲ್‌ ಕುಮಾರ್ ಪತ್ರ

ಟ್ರೆಂಡಿಂಗ್
share whatsappshare facebookshare telegram
30 Sept 2023
post image

    ಕಾರ್ಕಳ: ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಪ್ರಯತ್ನಗಳು ಮತ್ತು ಮುಂದಾಲೋಚನೆಯಿಂದಾಗಿ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಭಾರತದ ರೈಲು ಮಾರ್ಗಗಳ ಅಭಿವೃದ್ಧಿಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರು ಸದರಿ ರೈಲು ಸಂಚಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು ನಮಗೆಲ್ಲ ತಿಳಿದಂತೆ ಪ್ರಸ್ತುತ ಕರ್ನಾಟಕದಲ್ಲಿ ಮೂರು ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಅತಿ ಅಗತ್ಯವಾಗಿರುವ ಮಂಗಳೂರು-ಮುಂಬೈ ನಡುವೆ ʼವಂದೇ ಭಾರತ್‌ ಎಕ್ಸ್‌ಪ್ರೆಸ್‌ʼ ರೈಲು ಸಂಚಾರಕ್ಕಾಗಿ ಸಂಸದರ ಮುಖೇನ ಕೇಂದ್ರ ಸಚಿವರಿಗೆ ಕಾರ್ಕಳ ಶಾಸಕರಾದ ವಿ ಸುನಿಲ್‌ ಕುಮಾರ್ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.

ಮಂಗಳೂರು ಮತ್ತು ಮುಂಬೈ ನಡುವೆ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಸಂಪರ್ಕದಿಂದಾಗಿ ನಮ್ಮ ಕರಾವಳಿ ಕರ್ನಾಟಕದ ಜನತೆಯು ವ್ಯಾಪಾರ, ವ್ಯವಹಾರ, ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೇ, ವಿವಿಧ ಆಯಾಮಗಳಲ್ಲಿ ಮುಂಬೈನೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿರುತ್ತಾರೆ. ಪ್ರತಿನಿತ್ಯ ನೂರಾರು ಜನರು ಮುಂಬೈ ಮಹಾನಗರಕ್ಕೆ ಸಂಚರಿಸುತ್ತಿದ್ದು, ʻವಂದೇ ಭಾರತ್‌ʼ ಎಕ್ಸ್‌ಪ್ರೆಸ್‌ ರೈಲನ್ನು ಆರಂಭಿಸುವುದರಿಂದ ಪ್ರಯಾಣದ ಅವಧಿ ಹಾಗೂ ಆರ್ಥಿಕ ಹಿತದೃಷ್ಟಿಯಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ಮತ್ತು ಮುಂಬೈ ನಡುವೆ ಹೊಸ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕರಾದ ವಿ ಸುನಿಲ್ ಕುಮಾರ್ ಅವರು ಮನವಿ ಮಾಡಿಕೊಂಡಿರುತ್ತಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.