



ನವದೆಹಲಿ: ದೇಶದ ಮೊದಲ ಹೈಸ್ಪೀಡ್ ರೈಲು ಎನಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ದರದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪ್ರಯಾಣಿಕರ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿವೆಯಾದರೂ ಅವುಗಳ ಟಿಕೆಟ್ ದರ ದುಬಾರಿಯಾಗಿದೆ. ಹೀಗಾಗಿ ಕೆಲ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಕಡಿಮೆ ಅಂತರದ ಭಾರತ್ ರೈಲುಗಳ ಟಿಕೆಟ್ ದರಗಳ ಮರುಪರಿಶೀಲನೆಗೆ ರೈಲ್ವೆ ಮುಂದಾಗಿದೆ.
ಉದಾಹರಣೆಗೆ ಭೋಪಾಲ್- ಇಂದೋರ್ ವಂದೇ ಭಾರತ್ 3 ಗಂಟೆಗಳ ಪ್ರಯಾಣ ಅವಧಿ ಹೊಂದಿದ್ದು ಕೇವಲ ಶೇ. 21 ರಿಂದ 29ರಷ್ಟುಪ್ರಯಾಣಿಕರು ಮಾತ್ರವೇ ಪ್ರಯಾಣಿಸುತ್ತಿದ್ದಾರೆ. ಇದರ ಎಸಿ ಕೋಚ್ ಟಿಕೆಟ್ ದರವು 950 ರು. ಮತ್ತು ಎಕ್ಸಿಕ್ಯೂಟಿವ್ ಟಿಕೆಟ್ ದರ 1525 ರು. ಇದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.