logo
WhatsApp Image 2026-04-02 at 14.46.04.jpeg
hindalco everlast.jpeg

ವಿಠಲವಾಡಿ ಫ್ರೆಂಡ್ಸ್ ಕುಂದಾಪುರ ಆಶ್ರಯದಲ್ಲಿ ತೆನೆ ಪರ್ವ- 2021 ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
11 Oct 2021
post image

ಕುಂದಾಪುರ: ವಿಠಲವಾಡಿ ಫ್ರೆಂಡ್ಸ್ ಕುಂದಾಪುರ ಇವರ ಆಶ್ರಯದಲ್ಲಿ ತೆನೆ ಪರ್ವ 2021 ನೂತನ ಫಸಲಿನ ಆಗಮನದ ಸಂಭ್ರಮ 23ನೇ ವರ್ಷದ ಹೊಸ್ತಿನ ಪ್ರಯುಕ್ತ ಮಕ್ಕಳಿಗಾಗಿ ಅಭ್ಯಾಸ ವರ್ಗ, ಕೊರೋನ ಜಾಗೃತಿಯ ಬಗ್ಗೆ ವೈದ್ಯರಿಂದ ಸಲಹೆ, ಸ್ಮಾರ್ಟ್ ಕ್ವಿಜ್ (ಮಹಾಭಾರತ ಮತ್ತು ರಾಮಾಯಣದ ಬಗ್ಗೆ) ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಪುರಸಭಾ ಸದಸ್ಯ ಗಿರೀಶ್ ಹೊಸ್ತಿಲ ಹಬ್ಬವನ್ನು ಇಷ್ಟೊಂದು ವಿಜೃಂಭಣೆಯಿಂದ ನಡೆಸುತ್ತಿರುವುದು ಇಲ್ಲಿಯೇ. ಈ ರೀತಿ ಮಾಡುವುದರಿಂದ ಹಿಂದೂ ಸಂಸ್ಕೃತಿ ಉಳಿಯುತ್ತದೆ ಎಂದರು

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವಿಜಯಕುಮಾರ್, ಗೌರವಾಧ್ಯಕ್ಷ ಸುರೇಶ್ ವಿಠಲವಾಡಿ ಉಪಸ್ಥಿತರಿದ್ದರು

ತೆನೆ ಪರ್ವ ಕಾರ್ಯಕ್ರಮದ ಅಂಗವಾಗಿ ಕೃಷ್ಣಾನುಗ್ರಹ ಮಮತೆಯ ತೊಟ್ಟಿಲು ಇಲ್ಲಿ ಸಹಭೋಜನ ಹೊಸ್ತಿನ ಊಟ ಕಾರ್ಯಕ್ರಮವನ್ನು ಕೋಡಿ ರಾಮ ಪೂಜಾರಿ ಇವರ ಕುಟುಂಬಸ್ಥರ ವಿಠಲವಾಡಿ ಸಹಕಾರದಿಂದ ನೆರವೇರಿಸಲಾಯಿತ. ಮಹಿಳೆಯರು ಮತ್ತು ಮಕ್ಕಳಿಗೆ ಹಾಗೂ ಪುರುಷರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಜೆ ಬಹುಮಾನ ವಿತರಣೆಯ ಮೂಲಕ ಸಮಾರೋಪ ಸಮಾರಂಭ ನಡೆಸಲಾಯಿತು

ಪ್ರಕಾಶ್ ಹಾಗೂ ನಿತಿನ್ ಕಾರ್ಯಕ್ರಮ ನಿರೂಪಣೆ ಮಾಡಿ, ಶರತ್ ಧನ್ಯವಾದ ನೆರವೇರಿಸಿದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.