logo
WhatsApp Image 2026-04-02 at 14.46.04.jpeg
hindalco everlast.jpeg

ಹಿರಿಯ ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ ನಿಧನ

ಟ್ರೆಂಡಿಂಗ್
share whatsappshare facebookshare telegram
5 Feb 2023
post image

ಉಡುಪಿ : ಉಡುಪಿಯ ಶಿರಿಯಾರ ಗ್ರಾಮದ ಹಿರಿಯ ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್ (84ವರ್ಷ) ರವಿವಾರ ನಿಧನ ಹೊಂದಿದರು. ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರೀ, ಇಡಗುಂಜಿ, ಪೆರ್ಡೂರು, ಹಾಲಾಡಿ, ಗುಂಡುಬಾಳ, ಕಮಲಶಿಲೆ ಮೇಳವೂ ಸೇರಿದಂತೆ ಸುಮಾರು ಐದೂವರೆ ದಶಕಗಳ ಕಾಲ ಕಲಾಸೇವೆಗೈದ ಇವರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಳೆದ 13 ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.