



ಕಾರ್ಕಳ: ಸರಕಾರಿ ತರಬೇತಿ ಸಂಸ್ಥೆಯ ಟೆಕ್ ಲ್ಯಾಬ್‌ನ ಕಟ್ಟಡದ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಲಕ್ಷಾಂತರ ರೂಪಾಯಿ ಹಾನಿಯಾದ ಹಾಕಿದ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ನಡೆದಿದೆ.
ಕಾರ್ಕಳದ ಕಾಬೆಟ್ಟು ಎಂಬಲ್ಲಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್ ಲ್ಯಾಬ್‌ನ ಕಟ್ಟಡವನ್ನು ನಿರ್ಮಿಸಿದ್ದು, ಒಳಗಿನ ಸಾಮಾಗ್ರಿಗಳ ಅನುಷ್ಠಾನ ಕಾರ್ಯ ನಡೆ ಮೇ.4 ರಂದು ಯಾರೋ ಕಿಡಿಗೇಡಿಗಳು ಸರಕಾರಿ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್ ಲ್ಯಾಬ್‌ನ ಕಟ್ಟಡದ 12 ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಇದರಿಂದ ಸುಮಾರು 1 ಲಕ್ಷ ನಷ್ಟವುಂಟಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.