logo
WhatsApp Image 2026-04-02 at 14.46.04.jpeg
hindalco everlast.jpeg

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾ ಕೂಟ

ಟ್ರೆಂಡಿಂಗ್
share whatsappshare facebookshare telegram
6 Sept 2023
post image

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2023 ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿನ ಅಮೃತ ಭಾರತಿ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2023 ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿನ ಅಮೃತ ಭಾರತಿ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2023 ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿನ ಅಮೃತ ಭಾರತಿ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲರು ವೈ ಎಂ ಸಿ ಎ ದೈಹಿಕ ಶಿಕ್ಷಣ ಕಾಲೇಜು ಬೆಂಗಳೂರು ಶ್ರೀ ವಾಸುದೇವ ಭಟ್ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಕ್ರೀಡಾಕೂಟದ ಧ್ವಜಾರೋಹಣವನ್ನು ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಶ್ರೀಯುತ ಬಾಲಕೃಷ್ಣ ಮಲ್ಯ ಅವರು ಧ್ವಜಾರೋಹಣವನ್ನು ಮಾಡಿದರು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಕ್ರೀಡೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯವನ್ನು ಉಂಟುಮಾಡುತ್ತದೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಆಯೋಜಿಸಿ ತುಂಬಾ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ವಾಸುದೇವ ಭಟ್ ಕ್ರೀಡಾಕೂಟದ ದೀಪವನ್ನು ಬೆಳಗಿಸುವುದರೊಂದಿಗೆ ಮಾತನಾಡಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಲ್ಲಿ 10 ಶಾಲೆಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಎಲ್ಲಾ ಶಾಲೆಗಳು ಪಥಸಂಚಲನದಲ್ಲಿ ಭಾಗವಹಿಸಿದವು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾಭಾರತಿ ಕರ್ನಾಟಕ ಜಿಲ್ಲೆಯ ಅಧ್ಯಕ್ಷರು ಶ್ರೀಯುತ ಪಾಂಡುರಂಗ ಪೈ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ಗುರುದಾಸ ಶೆಣೈ, ಅಮೃತ ಭಾರತಿ ವಸತಿ ನಿಲಯದ ಅಧ್ಯಕ್ಷರು ಶ್ರೀಯುತ ಯೋಗೀಶ್ ಭಟ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರು ಶ್ರೀಯುತ ಶೈಲೇಶ್ ಕಿಣಿ , ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಸುಧೀರ್ ನಾಯಕ್, ಶ್ರೀ ಭಾಸ್ಕರ ಜೋಯಿಸ್ ಉಪಸ್ಥಿತರಿದ್ದರು .

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣ ಆಚಾರ್ , ಶ್ರೀಮತಿ ಶಕುಂತಲ, ಶ್ರೀಮತಿ ಅನಿತಾ ಶೆಟ್ಟಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಸಿ,ವೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಶ್ರೀ ಅಮರೇಶ್ ಹೆಗಡೆ, ಕರ್ನಾಟಕ ಉಡುಪಿ ಜಿಲ್ಲೆಯ ಕ್ರೀಡಾಕೂಟ ಪ್ರಮುಖ್ ಶ್ರೀಮತಿ ಉಷಾ ಶೆಟ್ಟಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ , ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಒಟ್ಟು 347ವಿದ್ಯಾರ್ಥಿಗಳು , ಶಿಕ್ಷಕರು 82 ಮತ್ತು ಸಂಸ್ಥೆಯ ಬೋಧಕೇತರ ವರ್ಗದವರು ಭಾಗವಹಿಸಿದರು. ಜಿಲ್ಲಾಮಟ್ಟದಲ್ಲಿ ಪ್ರಥಮ ದ್ವಿತೀಯ ಬಹುಮಾನವನ್ನು ಪಡೆದವರು ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ನವಂಬರ್ 14 15 ಮಾಧವ ವಿದ್ಯಾಲಯ ಮಂಡ್ಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವಿಮಲಾ ಮಾತಾಜಿ ಮತ್ತು ಜಿಲ್ಲಾ ಶಾರೀರಿಕ ಪ್ರಮುಖ ಶ್ರೀ ವಿಜಯಕುಮಾರ್ ಶೆಟ್ಟಿ, ಧನ್ಯವಾದ ದೈಹಿಕ ಶಿಕ್ಷಣ ಶಿಕ್ಷಕರು ನಿಶಾನ್ , ಸ್ವಾಗತ ಅಮೃತ ಭಾರತಿ ವಿದ್ಯಾ ಕೇಂದ್ರ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ರವೀಂದ್ರ ಶೆಟ್ಟಿ ಮಾಡಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.