



ವಿಜಯಪುರ ಅವಳಿ ಜಿಲ್ಲೆಗಳಾದ ವಿಜಯಪುರ-
ಬಾಗಲಕೋಟೆಗಳಲ್ಲಿ ಬೈಕ್ ಕಳ್ಳತನಕ್ಕೆ
ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು
ಬಂಧಿಸಲಾಗಿದ್ದು, 21.60 ಲಕ್ಷ ಮೌಲ್ಯದ 36
ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.
ಆನಂದಕುಮಾರ ಅವರು ನಗರದ
ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೈಕ್ ಕಳ್ಳತನದ ಆರೋಪಿಗಳಾದ ತೌಸೀಫ್ ಮಹಿಬೂಬ್ಕ ಲಾದಗಿ, ಸಮೀರ್ ಉಸ್ಮಾನಸಾಬ
ಬಳಗಾನೂರ, ಸುನೀಲ ಮಲ್ಲನಗೌಡ ಬಿರಾದಾರ
ಬಂಧಿತರು ಎಂದರು. ಈ ಆರೋಪಿಗಳು
ವಿಜಯಪುರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ
ಅಲ್ಲದೇ ನೆರೆಯ ಬಾಗಲಕೋಟೆ ಜಿಲ್ಲೆಯ
ಜಮಖಂಡಿಯಲ್ಲೂ ಬೈಕ್ ಕಳ್ಳತನ ಮಾಡಿದ್ದಾರೆ.
ಇತ್ತಿಚೆಗೆ ವಿಜಯಪುರದಲ್ಲಿ ಬೈಕ್ ಕಳ್ಳತನ
ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ತಂಡ
ರಚಿಸಲಾಗಿತ್ತು ಎಂದರು.
ಈ ಪ್ರಕರಣ
ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ನಗದು
ಬಹುಮಾನ ಘೋಷಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಾ.ರಾಮ ಅರಸಿದ್ದಿ, ಡಿವೈಎಸ್ಪಿ
ಲಕ್ಷ್ಮೀನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ,
ಪಿಎಸ್‌ಐ ಆರೀಫ್ ಮುಶಾಪುರೆ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.