



ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಒಂದೊಂದೇ ಉದ್ದೇಶಗಳು ಪೂರ್ಣಗೊಳ್ಳುತ್ತಿದ್ದು, ಇದೀಗ ವಿಕ್ರಂ ಲ್ಯಾಂಡರ್‌ನ ಫೆಲ್ಲೋಡ್, ಚಂದ್ರನ ಮೇಲ್ಮೈಯಲ್ಲಿರುವ ಪ್ಲಾಸ್ಮಾ ಪ್ರಮಾಣವನ್ನು ಪತ್ತೆ ಹಚ್ಚಿ ಮಾಹಿತಿ ರವಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ ವಾತಾವರಣ ಇರುವುದನ್ನು ಕಂಡುಬಂದಿದೆ ಎಂದು ತಿಳಿಸಿದೆ.
‘ಆರ್‌ಎಎಂಬಿಎಚ್-ಎಲ್‌ಪಿ ಉಪಕರಣವು, ಚಂದ್ರನ ಮೇಲ್ಮೈಗೆ ಸಮೀಪದ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಲೂನಾರ್ ಪ್ಲಾಸ್ಮಾ ಪರಿಸರವನ್ನು ಪತ್ತೆ ಹಚ್ಚಿದ್ದು, ಇದರಿಂದಾಗಿ ಚಂದ್ರನಲ್ಲಿ ರೇಡಿಯೋ ತರಂಗಗಳ ಪಸರುವಿಕೆಗೆ ಇರುವ ಅಡೆತಡೆಗಳು ದೂರವಾಗಲಿದ್ದು, ಮುಂದಿನ ಯಾನಗಳಿಗೆ ನೆರವಾಗಲಿದೆ.
ಇದರೊಂದಿಗೆ ಚಂದ್ರನ ಮೇಲಿನ ಕಂಪನಗಳ ಕುರಿತು ಅಧ್ಯಯನ ಆರಂಭಗೊಂಡಿದ್ದು, ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದ ಇನ್‌ಸ್ಟ್ರುಮೆಂಟ್ ಫಾರ್ ದ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ಐಎಲ್‌ಎಸ್‌ಎ) ಪೇಲೋಡ್ ಮೊದಲ ಬಾರಿ ರೋವರ್‌ನ ಓಡಾಟದ ಕಂಪನವನ್ನು ಪತ್ತೆ ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.