logo
WhatsApp Image 2026-04-02 at 14.46.04.jpeg
hindalco everlast.jpeg

ಗಣರಾಜ್ಯೋತ್ಸವಕ್ಕೆ ಹೆಬ್ರಿ ಎಸ್.ಆರ್ ಪಬ್ಲಿಕ್ ಸ್ಕೂಲ್’ನ ವಿದ್ಯಾರ್ಥಿ ವಿನೀಶ್ ಆಚಾರ್ಯ ಆಯ್ಕೆ.

ಟ್ರೆಂಡಿಂಗ್
share whatsappshare facebookshare telegram
17 Jan 2025
post image

ಉಡುಪಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಮತ್ತು ಕೇಂದ್ರ ರಕ್ಷಣಾ ಸಚಿವಾಲಯ(ಎಂಓಡಿ) ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ(ಎಂಇಒ)ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ ವೀರ್ ಗಾಥಾ 4.0 ಸ್ಪರ್ಧೆಯನ್ನು 3 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಹೆಬ್ರಿಯ ಎಸ್.ಆರ್.ಪಬ್ಲಿಕ್ ಸ್ಕೂಲಿನ 7ನೇ ತರಗತಿ ವಿದ್ಯಾರ್ಥಿ ವಿನೀಶ್ ಆಚಾರ್ಯ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದಾರೆ. ಇವರು ರಕ್ಷಣಾ ಸಚಿವರಿಂದ ಸನ್ಮಾನವನ್ನು ಪಡೆಯಲಿದ್ದಾರೆ.

ಶೌರ್ಯ ಪ್ರಶಸ್ತಿಗಳನ್ನು ಪಡೆದವರ ಶೌರ್ಯ ಮತ್ತು ಶೌರ್ಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಈ ಸ್ಪರ್ಧೆಯನ್ನು ಪರಿಚಯಿಸಲಾಗಿದ್ದು, ದೇಶದಲ್ಲಿ ಆಯ್ಕೆ ಆಗಿರುವ 100 ವಿದ್ಯಾರ್ಥಿಗಳಲ್ಲಿ ವಿನೀಶ್ ಆಚಾರ್ಯ ಒಬ್ಬರಾಗಿದ್ದಾರೆ.

ಇವರನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹೆಚ್.ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿವರಾದ ಸಪ್ನಾ ಎನ್. ಶೆಟ್ಟಿ ಅಭಿನಂದಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.