



ಉಡುಪಿ: ಉಡುಪಿ ಕುಂಜಿಬೆಟ್ಟು ಸಿ ಎ ಭವನಕ್ಕೆ ಮಂಗಳವಾರ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ಭೇಟಿ ನೀಡಿದರು. ಸಂಸ್ಥೆಯ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ದೇಶದ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಗಿದೆ. ದೇಶದಲ್ಲಿ ಹೊಸದಾಗಿ ಸಿ ಎ ಪಾಸ್ ಪಡೆಯುವ ಲೆಕ್ಕಪರಿಶೋಧಕರ ಅವ್ಯಶಕತೆ ಇದ್ದು, ಈ ನಿಟ್ಟಿನಲ್ಲಿ ಕಾರ್ಯ ರೂಪಿಸುವಂತೆ ಕರೆ ನೀಡಿದರು. ವಿದ್ಯಾರ್ಥಿ ಗಳ ಜೊತೆ ಸಂವಾದ ಕಾರ್ಯ ನೆಡೆಸಿದರು.
ಸಮಾರಂಭದಲ್ಲಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎ.ಕೋತಾ ಎಸ್. ಶ್ರೀನಿವಾಸ್, ಸಿ.ಎ.ಪ್ರಸನ್ನ ಕುಮಾರ್, ಸಿ.ಎ.ಮಂಗೇಶ್ ಕಿನಾರೆ, ಸಿ.ಎ.ಗೀತಾ ಎ.ಬಿ. ಹಾಗೂ ಉಡುಪಿ ಸಿ.ಎ.ಸಂಸ್ಥೆಯ ಅಧ್ಯಕ್ಷರಾದ ಸಿ.ಎ.ಮಹೇಂದ್ರ, ಸ್ಥಾಪಕ ಅಧ್ಯಕ್ಷ ಸಿ.ಎ.ಗುಜ್ಜಾಡಿ ಪ್ರಭಾಕರ ನಾಯಕ್, ಸಿ ಎ ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.