



ಕಾರ್ಕಳ " ಮಕ್ಕಳ ಹೆಗಲ ಮೇಲೆ ಸ್ಟೆತೊಸ್ಕೋಪನ್ನು ಹಾಕಿದಂತಹ ಉದಾಹರಣೆ ನನ್ನ ಜೀವನದಲ್ಲಿ ಇದೇ ಮೊದಲು ನೋಡುವುದು. ಆ ಮಕ್ಕಳಿಗೆ ಪೋಷಕರ ಭಾವನೆಗಳು ನನ್ನ ಮಕ್ಕಳು ಡಾಕ್ಟರ್ ಆಗುವಂತಹ ಹಂತಕ್ಕೆ ಬಂದು ಬಿಟ್ಟರಲ್ಲ ಅನ್ನುವಂತಹ ಖುಷಿ ಕಾಣುತ್ತಿದೆ. ಇದೆಲ್ಲದಕ್ಕೂ ಕಾರಣ ಜ್ಞಾನಸುಧಾದ ಬಳಗ. ಜ್ಞಾನಸುಧಾ ಬಳಗಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಇಷ್ಟು ದೊಡ್ಡ ಪ್ರಮಾಣದ ವಿದ್ಯಾರ್ಥಿಗಳನ್ನು ವೈದ್ಯಕೀಯ ಹಾಗೂ ಇಂಜಿನಿಯರಿAಗ್ ಕ್ಷೇತ್ರಕ್ಕೆ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಜೊತೆಗೆ ವಿದ್ಯಾರ್ಥಿಗಳ ಸಾಧನೆಯ ಫಲವನ್ನು ಕೃತಜ್ಞತಾ ಪೂರ್ವಕವಾಗಿ ಭಾರತೀಯ ಸೇನೆಗೆ ನಿಧಿಯ ರೂಪದಲ್ಲಿ ದೇಣಿಗೆ ಅರ್ಪಿಸುತ್ತಿರುವ ಏಕೈಕ ಸಂಸ್ಥೆ ಜ್ಞಾನಸುಧಾ ಶಿಕ್ಷಣ ಸಂಸ್ಥೆ. ಇಂತಹ ಉದಾತ್ತವಾದ ಶಿಕ್ಷಣ ಸಂಸ್ಥೆ ಇನ್ನೊಂದಿಲ್ಲ. ಯಾವ ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವುದಿಲ್ಲವೋ ಅದನ್ನು ಶಿಕ್ಷಣ ಎನ್ನುವುದಿಲ್ಲ ಎಂದಿದ್ದರು ವಿವೇಕಾನಂದರು. ಕನಸುಗಳನ್ನು ಹುಟ್ಟುಹಾಕದ ಶಿಕ್ಷಣವನ್ನು ಶಿಕ್ಷಣ ಎಂದು ಕರೆಯುವುದಿಲ್ಲ ಎಂದು ಕಲಾಂ ಹೇಳಿದ್ದರು. ಆದರೆ ಈ ಶಿಕ್ಷಣ ಸಂಸ್ಥೆ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತುತ್ತಿದೆ. ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಕಾರ್ಯ ಹಾಗೂ ಕಲಾಂರ ಕನಸುಗಳನ್ನು ಹುಟ್ಟುಹಾಕುವ ಕಲ್ಪನೆಗಳೆರಡು ಜ್ಞಾನಸುಧಾದಲ್ಲಿ ಸಾಕಾರಗೊಳ್ಳುತ್ತಿದೆ ಎಂದು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಜ್ಞಾನಗೋಪಾ¯ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಕ್ಷೇತ್ರದ ಶಾಸಕ ಶ್ರೀ ರಘುಪತಿ ಭಟ್ ಮಾತನಾಡಿ, ಜ್ಞಾನಸುಧಾ ನಮ್ಮ ಉಡುಪಿ ಜಿಲ್ಲೆಗೆ ಬಹಳ ದೊಡ್ಡ ಆಸ್ತಿ. ಇಲ್ಲಿಗೆ ವಿದ್ಯಾಭ್ಯಾಸವನ್ನು ಅರಸಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆಂದರೆ ಅದು ಜಿಲ್ಲೆಯ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಯಾವ ಇಂಜಿನಿಯರ್ ಹಾಗೂ ಮೆಡಿಕಲ್ ಕಾಲೇಜಿಗೂ ಕಡಿಮೆ ಇಲ್ಲದಂತಿರುವ ಒಳ್ಳೆಯ ಕ್ಯಾಂಪಸ್‌ನ ವೈಬ್ರೇಶನ್ ಇಲ್ಲಿದೆ. ಇದನ್ನು ನಾವು ಅನುಭವಿಸುತ್ತಿದ್ದೇವೆ ಎಂದರು. ನಾವು ವಿದ್ಯಾರ್ಥಿಗಳಿಗಾಗಿ ಭವಿಷ್ಯವನ್ನು ರೂಪಿಸಲು ಸಾದ್ಯವಿಲ್ಲ. ಆದರೆ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸಲು ಸಾದ್ಯವಿದೆ. ಜ್ಞಾನಸುಧಾವು ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಮುಖ್ಯ ಅಭ್ಯಾಗತರಾದ ಎನ್‌ಐಟಿ ಗೋವಾದ ನಿರ್ದೇಶಕ ಡಾ.ಗೋಪಾಲ್ ಮೊಗೆರಾಯ ನುಡಿದರು.
ಇದೇ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ವತಿಯಿಂದ ಪ್ರತಿ ಎಂಬಿಬಿಎಸ್ ಸೀಟಿಗೆ ೨ಸಾವಿರ ರೂಪಾಯಿಯಂತೆ ೭೩ ಸೀಟುಗಳಿಗೆ ಒಟ್ಟು ೧ ಲಕ್ಷ ೪೬ ಸಾವಿರ ರೂ ಮೊತ್ತದ ಚೆಕ್ ಅನ್ನು ರಾಷ್ಟಿçÃಯ ರಕ್ಷಣಾ ನಿಧಿಗೆ ಹಸ್ತಾಂತರಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸುಮಾರು ೧೩.೯ ಲಕ್ಷ ರೂ. ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಎಪಿಜಿಇಟಿ ಟ್ರಸ್ಟಿಗಳಾದ ಕರುಣಾಕರ್ ಶೆಟ್ಟಿ, ಎಂ.ಜಿ.ಗೌಡ್, ಶ್ರೀಮತಿ ವಿದ್ಯಾವತಿ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಜೈನ್, ಪ್ರಕಾಶ್ ಶೆಣೈ, ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನ ಸುಧಾ ಪಿಯು ಪ್ರಿನ್ಸಿಪಾಲ್ ದಿನೇಶ್ ಎಂ. ಕೊಡವೂರು, ಉಡುಪಿ ಜ್ಞಾನ ಸುಧಾ ಪಿಯು ಪ್ರಿನ್ಸಿಪಾಲ್ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನ ಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಉಷಾ ರಾವ್ ಯು, ಪಿ.ಆರ್.ಒ ಜ್ಯೋತಿ ಪದ್ಮನಾಬ್ ಭಂಡಿ ಭಾಗವಹಿಸಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ನಿರೂಪಿಸಿ, ಎಪಿಜಿಇಟಿ ಆಡಳಿತ ಮಂಡಳಿ ಸದಸ್ಯ ಅನಿಲ್ ಕುಮಾರ್ ಜೈನ್ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.